ಮದುವೆ ಮನೆಗಳಲ್ಲಿ ರೈತಚೇತನ ಪುಸ್ತಕ ಉಡುಗೊರೆಯಾಗಿ ಕೊಡುಗೆ

ಇದಕ್ಕಿಂತ ಖುಷಿಯ ವಿಚಾರ ಮತ್ತಿನ್ನೇನು..?!
ಇತ್ತೀಚಿನ ದಿನಗಳಲ್ಲಿ ಪಾಂಡವಪುರ ತಾಲೂಕಿನಾದ್ಯಂತ ಎಲ್ಲಿಯೆ ಸರಳ ವಿವಾಹ, ಮಂತ್ರಮಾಂಗಲ್ಯ ನಡೆದರು ಅಲ್ಲೆಲ್ಲ ನನ್ನ ರೈತಚೇತನ ಪುಸ್ತಕ ಇದ್ದೇ ಇರುತ್ತೆ. ಮದುವೆಯಾದ ದಂಪತಿಗಳು ವಿವಾಹಕ್ಕೆ ಬರುವ ದಂಪತಿಗಳಿಗೆ ಪುಸ್ತಕ ಹಂಚುತ್ತಾರೆ. ಅಥವಾ ಮದುವೆಯಾಗುವ ದಂಪತಿಗಳಿಗೆ ರೈತಚೇತನ ಪುಸ್ತಕ ನೀಡುತ್ತಾರೆ. ಈವತ್ತು ಕೂಡ ಅಂತಹದ್ದೆ ಘಟನೆ ನಡೆಯಿತು.ವಿಶೇಷವೆಂದರೆ ಆ ವಿವಾಹ ಕಾರ್ಯಕ್ರಮಕ್ಕೆ ನನಗೂ ಆಹ್ವಾನವಿತ್ತು.
ಈವತ್ತು ಪಾಂಡವಪುರ ತಾಲೂಕು ಎಣ್ಣೆಹೊಳೆಕೊಪ್ಪಲಿನ ರಘು ಅವರು ಹಳೆ ಎಲೆಕರೆಯ ದೇವಸ್ಥಾನದ ಬಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪುಸ್ತಕ ಎಲ್ಲಿ ಸಿಗುತ್ತೆ ಎಂದು ಮಾಹಿತಿ ಪಡೆದುಕೊಂಡು,ಗೆಳೆಯ ಪ್ರಭಾಕರ್ ಅವರ ಮೂಲಕ ಮೈಸೂರಿನ ಅಭಿರುಚಿ ಪ್ರಕಾಶನಕ್ಕೆ ಆಗಮಿಸಿ ಪುಸ್ತಕಗಳನ್ನು ಖರೀದಿಸಿಕೊಂಡು ಹೋಗಿದ್ದಾರೆ. ಈವತ್ತು ಸರಳ ವಿವಾಹ ಏರ್ಪಟ್ಟ ಬಳಿಕ ಮದುವೆಗೆ ಆಗಮಿಸಿದವರಿಗೆ ಎರಡು ವರ್ಷದ ಹಿಂದೆ ಹೊರತಂದ ಪುಸ್ತಕದ ಕುರಿತು ಹಾಗೂ ಪುಟ್ಟಣ್ಣಯ್ಯ ಅವರ ಸರಳತೆ , ಸರಳ ವಿವಾಹದ ಪ್ರೋತ್ಸಾಹದ ಬಗ್ಗೆ ಗಣ್ಯರು ತಿಳಿಸಿದ್ರು. ಹಿರಿಯರಾದ ಎ.ಎಲ್.ಕೆಂಪೂಗೌಡರು, ಗೋವಿಂದೇಗೌಡರು, ಬಡಗಲಪುರ ನಾಗೇಂದ್ರ ಸೇರಿ ಹಲವರಿದ್ದರು. ಅರೆ, ಒಬ್ಬ ಲೇಖಕನಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತಿನ್ನೇನೂ? ನೀವೇ ಹೇಳಿ…
🙏🏻
ರವಿಪಾಂಡವಪುರ
ಪತ್ರಕರ್ತ/ಲೇಖಕ