ಮದ್ಯಪ್ರಿಯರಿಗೆ ಜಾಗೃತಿ ಕಾರ್ಯಕ್ರಮ

426
Share

ಇವತ್ತಿನಿಂದ ಮದ್ಯ ಪಾನದ ಅಂಗಡಿಗಳನ್ನು ತೆರೆಯಲು ಅವಕಾಶವನ್ನು ಸರ್ಕಾರ ಕೊಟ್ಟಿದ್ದು. ಸಾಲುಗಟ್ಟೆಲೆ ಜನ ನಿಂತು ಕೊಳ್ಳುತ್ತಿದ್ದಾರೆ. ನಂಜುಮಳಿಗೆ ವೃತ್ತದಲ್ಲಿರುವ ಮದ್ಯದ ಅಂಗಡಿ ಮುಂದೆ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರು ಮದ್ಯಪಾನ ಕೊಳ್ಳಲು ಬರುತ್ತಿರುವವರಿಗೆ ಮಾಸ್ಕಗಳನ್ನು ಕೊಟ್ಟು , ಬಿತ್ತಿ ಪತ್ರದಲ್ಲಿ ಮದ್ಯಪಾನ ಜೀವಕ್ಕೆ ಹಾನಿಕರ , ಇರುವ ಸ್ವಲ್ಪ ಹಣವನ್ನು ಮದ್ಯ ಕುಡಿದು ಸಂಸಾರ ಹಾಳು ಮಾಡಬೇಡಿ , ಸಾರಾಯಿ ಸಹವಾಸ , ಹೆಂಡತಿ ಮಕ್ಕಳ ಉಪವಾಸ ಎಂದು ಬರೆದಿರುವ ಫಲಕ ಗಳನ್ನು ಹಿಡಿದು ಜಾಗೃತಿ ಮೂಡಿಸಿದರು . ಈ ಸಂದರ್ಭದಲ್ಲಿ ಮ ವಿ ರಾಮಪ್ರಸಾದ್ ರವರು ಮಾತನಾಡುತ್ತ ಜನ ಉಚಿತವಾಗಿ ರೇಷನ್ ಕಿಟ್ ಗಳನ್ನೂ ಪಡೆಯಲು ನಿಲ್ಲುವಂತೆ ಮದ್ಯಪಾನ ಕೊಳ್ಳಲು ನಿಂತಿರುವುದು ದುರಾಷ್ಟಕರ , ಬಹುತೇಕ ಜನರು ಕೂಲಿ ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದವರೇ ಸಾಲಿನಲ್ಲಿ ಇದ್ದಾರೆ . ೪೧ ದಿನದಿಂದ ಕುಡಿಯದೆ ಒಂದೇ ಸಲ ಹೆಚ್ಚಾಗಿ ಕುಡಿದರೆ ಅರೋಗ್ಯ ದಲ್ಲಿ ಏರುಪೇರಾಗಿ ಪುನಃ ಕಷ್ಟಕ್ಕೆ ಸಿಲುಕುತ್ತೀರ ಮೊದಲು ಹೆಂಡತಿ ಮಕ್ಕಳ ಊಟದ ಬಗ್ಗೆ ಯೋಚಿಸಿ ಶಾಲೆಗಳು ಇನ್ನು ಪ್ರಾರಂಭವಾಗಲಿದೆ ಮಕ್ಕಳ ಶಿಕ್ಷಣ ಬಗ್ಗೆ ನಿಗವಹಿಸಿ ಮುಂದಿನ ಭವಿಷ್ಯ ವನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು ಹಾಗು ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ಸಿ ಸಂದೀಪ್, ವಿಕ್ರಮ್ ಐಯಂಗಾರ್, ಧರ್ಮೇಂದ್ರ, ಅದ್ವೈತ್ ಮುಂತಾದವರು ಇದ್ದರು


Share