ಮನವರಿಕೆಯ ಮಾತು : ಯಾರು ಬಡವರು ? ಬಡತನಕೆ ಹೊಣೆ ಯಾರು ?

153
Share

ಬಡವರು, ಬಡತನ ನೀಗಿಸಬೇಕು, ಬಡರಾಷ್ಟ್ರ ಹೀಗೆ ಸಾಕಷ್ಟು ಸಲ ಬಡತನದ ಬಗ್ಗೆ ಕೇಳುತ್ತಲೇ ಇರುತ್ತೇವೆ. ಬಡತನ ನಿರ್ಮೂಲನ ಆಗಬೇಕು, ದೇವರಿಗೆ ಕನಿಕರ ಇಲ್ಲ, ಬಡವರು ಕಷ್ಟ ಪಡುತ್ತಾರೆ ಎಂದು ಆಗಾಗ ಕೇಳುತ್ತಲೆ ಇರುತ್ತೇವೆ.
ಪಂಚೇದ್ರಿಯಗಳು, ಬುದ್ಧಿ ಶಕ್ತಿ, ಯಾವುದೇ ಅಂಗ ವಿಕರಣ ಇಲ್ಲದೇ ಇರುವ ವ್ಯಕ್ತಿ, ಆದರೆ ಕೆಲವರ ಬಳಿ ಹಣ ಇರುವುದಿಲ್ಲ, ಪ್ರತಿನಿತ್ಯ ಅತ್ಯಗತ್ಯವಾದ ಆಹಾರ ಸೇವನೆಗೂ ಹಣವಿರುವುದಿಲ್ಲ. ಅವರನ್ನು ಏನೆಂದು ಪರಿಗಣಿಸುತ್ತೇವೆ ? ” ಬಡವ ” ಎಂದಲ್ಲವೆ.
ಆದರೆ ಇಷ್ಟೊಂದು ಸಾಮಾನ್ಯ ಅಥವ ಒಳ್ಳೆ ಆರೋಗ್ಯ ಹೊಂದಿರುವವರು ಹೇಗೆ ಬಡವರಾಗಲು ಸಾದ್ಯ ? ದೇವರಿಂದ ಇದಕ್ಕಿಂತ ಹೆಚ್ಚಾಗಿ, ಮತ್ತೇನನ್ನು ಪಡೆಯಲು ಸಾದ್ಯ ?
ಅವನು ಕೊಟ್ಟಿರುವ ದೇಹ, ಬುದ್ಧಿ ಎರೆಡನ್ನು ಉಪಯೋಗಿಸಿ ಸೋಮಾರಿತನ ಬಿಟ್ಟು ದುಡಿದರೆ ಯಾರೂ ಉಪವಾಸ ಇರುವ ಅಗತ್ಯವೇ ಬರಯವುದಿಲ್ಲ.
ಒಂದು ಸೋಮಾರಿತನ, ಎರೆಡೂ ಕೀಳರಿಮೆ. ಇವೆರೆಡನ್ನು ಬೆಳೆಸಿಕೊಳ್ಳುವುದು ನಮ್ಮ ಸ್ವಯಂ ಕೃತ ಅಪರಾಧ. ಆದರೆ ಇದನ್ನು ಒಪ್ಪಿಕೊಳ್ಳುವ ಮನೋಭಾವವು ಯಾರಿಗೆ ಇರುವುದಿಲ್ಲ ಅವರು ನಿಜವಾದ ಬಡವರು. ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ದೇವರ ಕಡೆ, ಸಮಾಜದ ಕಡೆ ಕೈ ತೋರಿಸುತ್ತಾ ತಮ್ಮನ್ನು ತಾವೇ ಮುದ್ದು ಮಾಡಿಕೊಳ್ಳುತ್ತಾ ತಾವು ಹಾಳಾಗಿ, ತಮ್ಮ ಕುಟುಂಬವನ್ನು ಹಾಳು ಮಾಡಿ, ಸಮಾಜವನ್ನು ಹಾಳು ಮಾಡುತ್ತಾರೆ.
ಆದರೆ ವಿಪರ್ಯಾಸದ ವಿಷಯವೆಂದರೆ ದೇವರನ್ನು ದೂರುವುದು. ಒಮ್ಮೆ ಯೋಚಿಸಿ ನೋಡಿ ! ಪ್ರಪಂಚದ ಅತಿ ಸೀರಿವಂತ ಮನುಷ್ಯನಿಗೂ, ಬಡವ ಎಂದು ಹೇಳಿಕೊಳ್ಳುವ ಮನುಷ್ಯರಿಗೂ ಅಂಗಾಂಗಗಳಲ್ಲಿ ದೇವರು ಏನಾದರೂ ವ್ಯತ್ಯಾಸ ಮಾಡಿದ್ದಾನೆಯೆ ? ಒಬ್ಬರಿಗೆ ಎರೆಡು ಮೆದಳು, ಇನ್ನೊಬ್ಬರಿಗೆ ಒಂದು, ಹಿಂದೆ ಪೌರಾಣಿಕ ಕಥೆಗಳಲ್ಲಿ ಕೇಳುತ್ತದ್ದಂತೆ ಹೆಚ್ಚಿಗೆ ತಲೆಗಳು, ಕೈಗಳು ಮತ್ತೊಂದು ಯಾವುದಾದರೂ ಜಾಸ್ತಿ ಕಡಿಮೆ ನೀಡಿದ್ದಾನೆಯೇ ? ಖಂಡಿತ ಇಲ್ಲ. ಎಷ್ಟೋ ಜನ ಮಹನೀಯರು ಕಡು ಬಡತನದಲ್ಲಿದ್ದು ಅವರು ಸಮಾಜದಲ್ಲಿ ಅತ್ಯುನ್ನತ ಸ್ಥಿತಿ ತಲುಪಿಲ್ಲವೇ ? ಮತ್ತೆ ನಿಜವಾದ ಬಡವಾರು ಯಾರು ಎಂದು ನಾವೇ ತೀರ್ಮಾನ ಮಾಡಬೇಕು. ನಮ್ಮ ಸ್ಥಿತಿಗೆ ನಾವೇ ಕಾರಣ ಕರ್ತರು.

* ಬಾಲರಾ


Share