ಮಹಿಳೆ ಪುರುಷನಷ್ಟೆ ಪ್ರಬುದ್ಧಳು’ : ಡಾಕ್ಟರ್ ಸುಷ್ಮಾ

Share

 

*ಮಹಿಳೆ ಪುರುಷನಷ್ಟೆ ಪ್ರಬುದ್ಧಳು’ : ಡಾಕ್ಟರ್ ಸುಷ್ಮಾ*

ವಿಶ್ರಾಂತಿ ಇಲ್ಲದೇ ದುಡಿದರೂ ಯಾವತ್ತೂ ಸಹನೆ ಕಳೆದುಕೊಳ್ಳದೆ ಹೆಣ್ಣು ಸಂಸಾರದ ಭಾರವನ್ನು ಸರಿದೂಗಿಸುತ್ತಾಳೆ ಎಂದು ವೈದ್ಯರಾದ ಡಾ. ಸುಷ್ಮಾ ಹೇಳಿದರು.

ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ
ಸಾಧಕರಾದ
ಉದ್ಯಮ ಕ್ಷೇತ್ರ ರಚನಾ ಮಹೇಶ್, ಶಿಕ್ಷಣ ಕ್ಷೇತ್ರ ಕೌಸಲ್ಯ ಎನ್ ಸಿ, ಆರೋಗ್ಯ ಕ್ಷೇತ್ರ ಚಂದ್ರವತಿ, ಸ್ವಚ್ಛತಾ ಕ್ಷೇತ್ರ ಸಂಗೀತ ಸೆಲ್ವನ್ ರವರಿಗೆ
ಬೈರವಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ
ಮಾತನಾಡಿದರು.

ಆಧುನಿಕ ಸಮಾಜದಲ್ಲಿ ಮಹಿಳೆ ಪುರುಷನಷ್ಟೇ ಪ್ರಬುದ್ಧಳಾದರೂ ಹಲವಾರು ಕ್ಷೇತ್ರಗಳಲ್ಲಿ ಪುರುಷನಷ್ಟೇ ಸಮಾನವಾದ ಅವಕಾಶ ನೀಡದೆ ಇರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಮಕ್ಕಳ ಮಾರಾಟ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಪ್ರತಿ ಹೆಣ್ಣುಮಕ್ಕಳ ಪೋಷಕರು ಜಾಗೃತರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ನಗರಪಾಲಿಕ ಸದಸ್ಯರಾದ ಪ್ರೇಮ ಶಂಕರೇಗೌಡ, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್,
ರೂಪದರ್ಶಿ ತನಿಷ್ಕಾ ಶೆಟ್ಟಿ ಭೈರವಿ ಗೌಡತಿಯರ ಬಳಗದ ರೇಣುಕಾ ಜಗದೀಶ್, ರಾಧಾ ಜೈ ರಾಮ್, ಕೋಮಲ ವೆಂಕಟೇಶ್, ಸುಶೀಲಾ ಬಸವರಾಜ್, ಉಮ ನಾಗೇಶ್, ರೇವತಿ ಕೃಷ್ಣಪ್ಪ, ರಾಧಾ ಲಂಕೇಗೌಡ, ಹಾಗೂ ಇನ್ನಿತರರು ಭಾಗವಹಿಸಿದರು


Share