ಮಾಘ ಪೌರ್ಣಮಿ:ವಿಶೇಷ ಸತ್ಯನಾರಾಯಣ ಪೂಜೆ

829
Share


ಮಾಘ ಪೌರ್ಣಮಿ:ವಿಶೇಷ ಸತ್ಯನಾರಾಯಣ ಪೂಜೆ
ಮೈಸೂರು-ನಂಜನಗೂಡು ರಸ್ತೆಯ ಅವಧೂತ ದತ್ತಪೀಠದಲ್ಲಿ, ದತ್ತಪೀಠಾಧಿಪತಿ ಪರಮಪೂಜ್ಯ ಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದಗಳೊಂದಿಗೆ ಆಶ್ರಮದ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿ ಸನ್ನಿಧಿಯಲ್ಲಿ ನಾಳೆ ಮಾಘ ಪೌರ್ಣಮಿ (ಮಹಾಮಾಘಿ) ಪ್ರಯುಕ್ತ ವಿಶೇಷ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
ಅನೇಕರಿಗೆ ಮನೆಗಳಲ್ಲಿ ಸತ್ಯನಾರಾಯಣ ಪೂಜೆಯನ್ನು ಆಚರಿಸಬೇಕೆಂಬ ಶ್ರದ್ಧೆ ಇದ್ದಾಗ್ಯೂ ಪರಿಸ್ಥಿತಿಯ ಅಭಾವದಿಂದ ಸಾಧ್ಯವಾಗದೇ ಇರುವುದುಂಟು. ಅಂಥವರಿಗಾಗಿ ಪೂಜ್ಯ ಸದ್ಗುರುದೇವರು ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ 10ರಿಂದ 12ರವರೆಗೆ ಸತ್ಯನಾರಾಯಣ ವ್ರತ ಮತ್ತು ಪವಮಾನ ಹೋಮಗಳು ನಡೆಯಲಿವೆ.
ವ್ರತದಲ್ಲಿ ಭಾಗವಹಿಸುವವರೆಲ್ಲರಿಗೂ ಸಕಲ ಪೂಜಾ ದ್ರವ್ಯಗಳನ್ನೂ ನೀಡಲಾಗುತ್ತಿದ್ದು, ಸ್ವತಃ ವ್ರತವನ್ನು ಆಚರಿಸಬಹುದಾಗಿದೆ. ಭಕ್ತಾದಿಗಳು ಈ ಸದವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಿ. ನಿಮ್ಮ ಕಷ್ಟಗಳನ್ನೆಲ್ಲ ದೂರಮಾಡಿಕೊಳ್ಳಿ. ಸ್ವಾಮಿಯ ಕೃಪೆಗೆ ಪಾತ್ರರಾಗಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 0821 – 2486486


Share