ಮಾನಸಿಕ ಅಸ್ವಸ್ಥತೆಯ ಪರಮಾವಧಿ –  ಹೆಣ್ಣು‌ ಮಕ್ಕಳ ಮಾನ ಬೀದಿಗೆ…..!!!!!!!!*ರಾಮ್

115
Share

 

*ಮಾನಸಿಕ ಅಸ್ವಸ್ಥತೆಯ ಪರಮಾವಧಿ –  ಹೆಣ್ಣು‌ ಮಕ್ಕಳ ಮಾನ ಬೀದಿಗೆ…..!!!!!!!!*

ರಾಜ್ಯದ ಪೆನ್‌ ಡ್ರೈವ್ ಲೈಂಗಿಕ ವಿಡಿಯೋ ಪ್ರಕರಣ ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದೆ. ಅಂತರಾಷ್ಟ್ರೀಯವಾಗಿ, ರಾಷ್ಟ್ರೀಯವಾಗಿ ಜನಮನ್ನಣೆ ಗಳಿಸಿದವರು, ಹಿರಿಯರು, ಮುತ್ಸದ್ದಿಗಳು ಈ ವಿಚಾರದಿಂದ ಇರಿಸು ಮುರಿಸಿಗೆ ಸಿಲುಕಿದ್ದಾರೆ. ಯಾವುದೇ ನಾಗರೀಕ ಸಮಾಜ ಸಹಿಸದ, ಊಹಿಸಲಾಗದ ಅನಾಗರೀಕ ವರ್ತನೆಯ ಪರಮಾವಧಿ ಹಾಗೂ ಯಾರು ಎಳ್ಳಷ್ಟು ಸಮರ್ಥಿಸಿಕೊಳ್ಳಲಾಗದ್ದಂತದ್ದು ಈ ವಿಡಿಯೋ ಪ್ರಕರಣ. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ವಿಡಿಯೋ ಪ್ರಕರಣದಿಂದ ಯುವಪೀಳಿಗೆ ಹಾಗೂ ಪೋಷಕರು ಒಂದಷ್ಟು ಪಾಠ ಕಲಿಯಬೇಕಿದೆ ಅದಕ್ಕಾಗಿ ಅಳೆದು ತೂಗಿ ಬರೆಯಲೋ ಬೇಡವೋ ಅಂತಾ ಗೊಂದಲಕ್ಕೆ ಸಿಲುಕಿ ಕೊನೆಗೆ ಆಗಿದ್ದಾಗಲಿ ಸಮಾಜಕ್ಕೆ ಒಂದಷ್ಟು ಉಪಯುಕ್ತ ಮಾಹಿತಿ ಸಿಗಲಿ ಅನ್ನೋ ಕಾರಣಕ್ಕಾಗಿ ಈ ಲೇಖನ ಬರೆದಿದ್ದೇನೆ.

*ರಾಜಕಾರಣದಿಂದ ದಿಕ್ಕು ತಪ್ಪಿದ ಪ್ರಕರಣ*
ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಅದರಲ್ಲಿ ಮೊದಲು ಗಣನೆಗೆ ಬರುವುದು ಲಾಭ ನಷ್ಟದ ಲೆಕ್ಕಾಚಾರ. ಆ ವಿಚಾರದಿಂದ ಯಾರಿಗೆ ಲಾಭ ಯಾವ ರೀತಿ ಲಾಭ ಯಾರಿಗೆ ನಷ್ಟ, ಯಾವ ರೀತಿ ನಷ್ಟ ಅನ್ನೋ ಲೆಕ್ಕಾಚಾರ ಜೋರಾಗಿರುತ್ತದೆ. ಅದರಲ್ಲೂ ಸಾಮಾಜಿಕವಾದ ಬಹುತೇಕ ವಿಷಯಗಳು ರಾಜಕೀಯ ಬಣ್ಣ ಬಳಿದುಕೊಂಡು ಸತ್ಯವೇ ಕಾಣದಂತೆ ಆಗಿಬಿಟ್ಟಿದೆ. ಈ ಪ್ರಕರಣದಲ್ಲೂ ಆಗಿರುವುದು ಅದೇ. ಎಂದೂ ಕಂಡು ಕೇಳರಿಯದ ಅಪರಾಧ ಕೃತ್ಯ ಕಣ್ಣಿನ ಮುಂದಿದೆ. ಆರೋಪಿ ಯಾರು ಅನ್ನೋ ಬಗ್ಗೆ ಕ್ಲ್ಯಾರಿಟಿ ಇದೆ, ಆತ ಮಾಡಿರುವ ಘೋರ ಕೃತ್ಯ ಎಂತಹದ್ದು ಅನ್ನೋ ಬಗ್ಗೆ ಸ್ಪಷ್ಟತೆ ಇದೆ. ಆತನ ಹೆತ್ತವರು, ಮನೆಯವರು, ಸಂಬಂಧಿಗಳು, ಆಪ್ತರು, ಹಾಗೂ ಸ್ನೇಹಿತರಾದಿಯಾಗಿ ಯಾರೊಬ್ಬರು ಆತನ‌ ಬಗ್ಗೆ ಕಿಂಚಿತ್ತೂ ಸಹಾನುಭೂತಿ ಹೊಂದಿಲ್ಲ. ಹೀನ ಕೃತ್ಯವನ್ನು ಖಡಾ ಖಂಡಿತವಾಗಿ ಕಡ್ಡಿ ಮುರಿದಂತೆ ಖಂಡಿಸಿದ್ದಾರೆ. ಕೃತ್ಯ ಮಾಡಿದವನಿಗೆ ಥೂ ಚೀ ಎಂದು ಛೀಮಾರಿ ಹಾಕಿದ್ದಾರೆ. ಆತ ಎಲ್ಲೇ ಕಂಡರು ವಿಶೇಷ ಸೇವೆ ನಿಶ್ಚಿತ ಅನ್ನುವಂತಹ ಪರಿಸ್ಥಿತಿ ಇದೆ. ಆದರೆ ಯಾವಾಗ ಇದು ರಾಜಕೀಯ ದಾಳವಾಗಿ ಬದಲಾಯಿತೋ ಅಲ್ಲಿಗೆ ಈ ಪ್ರಕರಣ ಹಳ್ಳ ಹಿಡಿಯುವ ಕಡೆಗೆ ಹೊರಟಿತು. ಅದಕ್ಕೆ ನಾಗಾಲೋಟವನ್ನು ಕೊಟ್ಟವರು ನಮ್ಮ ಸೋ ಕಾಲ್ಡ್ ನಮ್ಮದೇ ಜನಪ್ರತಿನಿಧಿಗಳಾದ ಜವಾಬ್ದಾರಿಯುತ ರಾಜಕಾರಣಿಗಳು. ಇನ್ನು ಇವರುಗಳ ಮನಸಲ್ಲಿ ಇಂತಹ ಪೈಶಾಚಿಕ ಕೃತ್ಯ ಎಸಗಿದವನಿಗೆ ತಕ್ಕ ಶಾಸ್ತಿ, ಶಿಕ್ಷೆಯಾಗಬೇಕು ನೊಂದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬ ನೈಜ ಕಾಳಜಿಯಿದ್ದಿದ್ದರೆ….! ಇವರೆಲ್ಲಾ ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಶರಣಾಗಿದ್ದರೆ ಸಾಕಾಗಿತ್ತು. ಶಿಕ್ಷೆ, ಆ್ಯಕ್ಷನ್, ಕಟ್ ಎಲ್ಲವೂ ಆಗುತಿತ್ತು. ಇದು ಯಾವುದೋ ಕಾನೂನೂ ತಜ್ಞರ ಅಭಿಪ್ರಾಯವಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾದ ಪಾಪದ ಜನರ ಅಭಿಪ್ರಾಯ. ಆ ವಿಡಿಯೋವನ್ನು ಮಕ್ಕಳು, ದೊಡ್ಡವರು, ಮಹಿಳೆಯರು, ಹಿರಿಯರು, ವೃದ್ದರು ಎನ್ನದೇ ಹತ್ತತ್ತು ಸಲ‌ ನೋಡಿದವರ ಸ್ಪಷ್ಟ ಅಭಿಪ್ರಾಯ ಇದು.

*ಆರೋಪಿ ಮಾನಸಿಕತೆ – ಹೆಣ್ಣು ಮಕ್ಕಳ ಜೀವನ*

ಯಾವತ್ತು ಯಾವುದೇ ಸಮಸ್ಯೆಯಾದಾಗ ಅದರ ಮೂಲ ಅರಿತಾಗ ಅದಕ್ಕೊಂದು ಕ್ಲ್ಯಾರಿಟಿ ಸಿಗುತ್ತದೆ. ಈ ಪ್ರಕರಣದಲ್ಲಿ ನಾನು ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕಿದ್ದೇನೆ. ತಜ್ಞರು, ಪೊಲೀಸ್ ಅಧಿಕಾರಿಗಳು ಸ್ಥಳೀಯರು ಜೊತೆ ಮಾತನಾಡಿದ್ದೇನೆ. ಜೊತೆಗೆ ಆರೋಪಿಯ ಆಪ್ತರ ಬಳಿ ವಿಚಾರಿಸಿದಾಗ ತಿಳಿದು ಬಂದ ವಿಚಾರ ಹಾಗೂ ಅಂಶಗಳು ನನ್ನನ್ನು ಬೆಚ್ಚಿ ಬೀಳಿಸಿದವು. *ಅಷ್ಟೇ ಅಲ್ಲ ಇದನ್ನು ಮುಕ್ತವಾಗಿ ನಮ್ಮ ಯುವಪೀಳಿಗೆ ತಿಳಿಸಿದಾಗ ಮಾತ್ರ ಇಂತಹ ಮತ್ತೊಂದು ಪ್ರಕರಣ ಆಗಲಾರದು ಅನ್ನೋ ಕಾರಣಕ್ಕಾಗಿ ಈ ಲೇಖನ ಬರೆದಿದ್ದೇನೆ.* ಇಲ್ಲಿ ಆರೋಪಿಯ ಕೃತ್ಯಕ್ಕಿಂತ ಆತ ಆ ಕೃತ್ಯವೆಸಗಲು ಕಾರಣವಾದ ಅಂಶಗಳು ನನಗೆ ಅಪಾಯಕಾರಿ ಅನಿಸಿತು‌.

*ಪ್ಯಾಟ್ರನ್‌ಗಳ ಸರಮಾಲೆ*

ಈ ಪ್ರಕರಣದಲ್ಲಿ ಆರೋಪಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಅಂದರೆ ತಲೆ‌ ಕೆಟ್ಟು ಹುಚ್ಚನಾಗಿ ಈ ಕೃತ್ಯ ಮಾಡಿದ್ದಾನೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ‌ ಹೇಳಬೇಕೆಂದರೆ ಹುಚ್ಚು ಹಿಡಿದವರು ಮಾತ್ರ ಈ ರೀತಿ ಕೃತ್ಯವೆಸಗಬೇಕು. ಅಥವಾ ಈ ರೀತಿ ಕೃತ್ಯವೆಸಗಿದವರಿಗೆ ಹುಚ್ಚು ಹಿಡಿದಿರಬೇಕು ಅನ್ನೋದಂತು ಸ್ಪಷ್ಟ. ಇನ್ನು ಆರೋಪಿ ಈ‌ ಕೃತ್ಯದಲ್ಲಿ ಮೂರು ಪ್ಯಾಟ್ರನ್ ಇಟ್ಡುಕೊಂಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇದು ಆತನ ವಿಡಿಯೋ ನೋಡಿದ ಎಲ್ಲರಿಗೂ ಗೊತ್ತಾಗುತ್ತದೆ. ಆ ಪ್ಯಾಟ್ರನ್‌ ಬಗ್ಗೆ ಹೇಳುವ ಮುನ್ನ ಈತನ ಈ ಕೃತ್ಯಕ್ಕೆ ಕಾರಣ ಆತನಿಗೆ ಕೆಲ ವರ್ಷಗಳಿಂದ ಶುರುವಾಗಿದ್ದ ಅದೊಂದು ಅನುಮಾನ ಹಾಗೂ ಕೀಳರಿಮೆ ಅನ್ನೋ ವಿಚಾರ ಮೂಲಗಳಿಂದ ಗೊತ್ತಾಗಿದೆ. *ಹೌದು ಆರೋಪಿಗೆ ಕೆಲ ದಿನಳಿಂದ ತಾನು ಗಂಡಸೋ ಅಲ್ಲವೋ‌ ಅನ್ನೋ ಅನುಮಾನ ಕಾಡುತ್ತಿತ್ತಂತೆ. ಯಾವ ಮಟ್ಟಿಗೆ ಎಂದರೆ ತಾನು ಗಂಡಸೇ ಅಲ್ಲ ಅನ್ನೋ ತೀರ್ಮಾನಕ್ಕೆ ಆತ ಬಂದಿದ್ದನಂತೆ. ಇದೇ ವಿಚಾರವಾಗಿ ಆತ ಮಾನಸಿಕ ರೋಗಿಯಾಗಿದ್ದನಂತೆ. ಕೀಳರಿಮೆಯಿಂದ ಬಳಲಿ ವ್ಯಸನಿಯಾಗಿದ್ದನಂತೆ.*

*ಪ್ಯಾಟ್ರನ್ 1*

ಆರೋಪಿ ತಾನು ಗಂಡಸು ಅಂತಾ ಸಾಬೀತು ಮಾಡಿಕೊಳ್ಳಲು ಕಂಡು ಕೊಂಡದ್ದೇ ಈ ವಿಡಿಯೋ ಪ್ರಕರಣಕ್ಕೆ ಬಂದು ನಿಂತಿದೆ. ಈತ ಇದಕ್ಕಾಗಿ ಆಯ್ದುಕೊಂಡ ಮೊದಲ ಪ್ಯಾಟ್ರನ್. ನೇರವಾಗಿ ಹೆಣ್ಣು ಮಕ್ಕಳನ್ನು ತನ್ನ ಖಾಸಗಿ ಸ್ಥಳಕ್ಕೆ ಕರೆಸಿಕೊಂಡು ಅವರನ್ನು ನಗ್ನಗೊಳಿಸಿ, ಅವರನ್ನು ಮುಟ್ಟಿ, ಲೈಂಗಿಕ ಕ್ರಿಯೆಯಲ್ಲಿ ತೊಡಗಿ ತಾನು ಸಮರ್ಥನೋ, ಅಸಮರ್ಥನೋ ಅನ್ನೋದನ್ನು ವಿಡಿಯೋ ಮಾಡಿ ನೋಡಿಕೊಳ್ಳುತ್ತಿದ್ದನಂತೆ. ಇದಕ್ಕೆ ಸಾಕ್ಷಿ ವಿಡಿಯೋಗಳಲ್ಲಿ ಆತನ ಮುಖಕ್ಕಿಂತ ಖಾಸಗಿ ಭಾಗಗಳನ್ನೇ ಆತ ವಿಡಿಯೋ ಶೂಟ್ ಮಾಡಿಕೊಂಡಿದ್ದಾನೆ. ಮತ್ತು ಪದೇ ಪದೇ ಆ ಹೆಣ್ಣು ಮಕ್ಕಳಿಗೆ ವಿವಿಧ ರೀತಿಯಲ್ಲಿ ಪೋಸ್ ಕೊಡುವಂತೆ ಪುಸಲಾಯಿಸುತ್ತಾನೆ.

*ಪ್ಯಾಟ್ರನ್ 2*
ಆತನಿಗೆ ಈ ರೀತಿ ಅನುಮಾನ ಬಂದಾಗ, ಯಾರು ತನ್ನ ಖಾಸಗಿ ಸ್ಥಳಕ್ಕೆ ಬಾರದಿದ್ದಾಗ, ಈ‌ ಕೃತ್ಯಕ್ಕೆ ಹಿಂದೆ ನೇರವಾಗಿ ಬಳಸಿಕೊಂಡಿದ್ದ ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡುತ್ತಿದ್ದನಂತೆ. ಈ ವೇಳೆ ವಿಡಿಯೋ ಕಾಲ್‌ಗೆ ಸಿಕ್ಕವರು ಈತ ಹೇಳಿದಂತೆ ಕೇಳಬೇಕು. ಒಂದೊಂದೇ ಬಟ್ಟೆ ಕಳಚಬೇಕು. ಇದನ್ನು ನೋಡಿ ಈತನಲ್ಲಾಗುವ ಬದಲಾವಣೆ ಮೂಲಕ ಆತ ತಾನು ಗಂಡಸು ಅನ್ನೋದನ್ನು ಪ್ರೂ ಮಾಡಿಕೊಂಡು ಸಮಾಧಾನಗೊಳ್ಳುತ್ತಿದ್ದನಂತೆ.

*ಪ್ಯಾಟ್ರನ್ 3*
ಇನ್ನು ತನಗೆ ಆ ರೀತಿ ಅನಿಸಿದಾಗ ಅದನ್ನು ಸಾಬೀತುಪಡಿಸಲು ಯಾರು ನೇರವಾಗಿ ಬಾರದೆ, ವಿಡಿಯೋ ಕಾಲ್ ಮೂಲಕವೂ ಸಿಗಿದಿದ್ದರೆ. ಆ ಹೆಣ್ಣು ಮಕ್ಕಳು ಈತನಿಗೆ ಅವರ ವಿಡಿಯೋ ಕಳುಹಿಸಬೇಕು. ಅದರಲ್ಲಿ ಈತ ಹೇಳಿದಂತೆ ಅವರು ಮಾಡಿ ವಿಡಿಯೋ ಕಳುಹಿಸಬೇಕು. ಅವರು ಕಳುಹಿಸಿದ ವಿಡಿಯೋ ಆತ ದೊಡ್ಡ ಪರದೆಯಲ್ಲಿ ಹಾಕಿಕೊಂಡು ನೋಡುತ್ತಾ ತನ್ನ ಖಾಸಗಿ ಅಂಗದ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳುತ್ತಿದ್ದನಂತೆ.

*ಮಾನಸಿಕ ಅಸ್ವಸ್ಥ*
ಈ ಪ್ಯಾಟ್ರನ್‌ಗಳು ಆತನ ವಿಡಿಯೋ ನೋಡಿದ ಎಲ್ಲರಿಗೂ ಗೊತ್ತಿರುತ್ತದೆ. ಈತ ಬಳಸಿಕೊಂಡಿರುವ ಹೆಣ್ಣು ಮಕ್ಕಳಲ್ಲಿ ಈತನಿಗೆ ವಯಸ್ಸು, ಬ್ಯೂಟಿ, ಇತರ ಯಾವುದು ಮುಖ್ಯ ಆಗಿಲ್ಲ‌. ಕೇವಲ ಕೇವಲ ಆ ಸಮಯಕ್ಕೆ ಆತನ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳುವುದಷ್ಟೇ ಆತನಿಗೆ ಮುಖ್ಯವಾಗಿತ್ತು. ಅದಕ್ಕಾಗಿ ಆತ ಮನೆ ಕೆಲಸದವರು, ಹಾಲಿನವರು ಸೇರಿ ಸಿಕ್ಕ ಸಿಕ್ಕವರನ್ನು ಬಳಸಿಕೊಂಡಿದ್ದಾನೆ ಅನ್ನೋದು ಆತನನ್ನು ಹತ್ತಿರದಿಂದ ನೋಡಿದವರು ನೀಡಿದ ಮಾಹಿತಿ.

*ಚಿಕಿತ್ಸೆ*
ಯಾವಾಗ ಆತನಿಗೆ ಈ ರೀತಿಯ ಅನುಮಾನ, ಮಾನಸಿಕ ಕಿರಿಕಿರಿ, ಕೀಳರಿಮೆ ಕಾಡತೊಡಗಿತೋ ಆಗ ಆತ ಸೂಕ್ತ ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಿತ್ತು. ಆಗ ಆತ ಈ ಹುಚ್ಚಾಟ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ.. ಅಥವಾ ಆತ ತನಗೆ ಉಂಟಾಗಿದ್ದ ಅನುಮಾನದ ಬಗ್ಗೆ ಮನೆಯವರ ಬಳಿ ಅಥವಾ ಸ್ನೇಹಿತರ ಬಳಿ ಮನಸು ಬಿಚ್ಚಿ ಹೇಳಿಕೊಳ್ಳಬೇಕಿತ್ತು. ಆದ್ರೆ ಆತ ಅದನ್ನು ಮಾಡದೇ ಈ ರೀತಿಯ ಘನಘೋರ ಅಪರಾಧ ಮಾಡಿ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ.

*ಯುವಪೀಳಿಗೆಗೆ ಪಾಠವಾಗಲಿ – ಸೆಕ್ಸ್ ಮಾತುಕತೆ ಮುಕ್ತವಾಗಿರಲಿ.*

ನಮ್ಮ ದೇಶದಲ್ಲಿ ಮಾತು ಕಡಿಮೆ‌, ಕೆಲಸ ಜಾಸ್ತಿ ಮಾಡೋದು ಯಾವುದಾದರೂ ಇದ್ದರೆ ಅದು ಸೆಕ್ಸ್‌ನಲ್ಲಿ ಮಾತ್ರ……!. ಇದಕ್ಕೆ ಸಾಕ್ಷಿ ಈ ವಿಚಾರ ಮುಕ್ತವಾಗಿ ಮಾತನಾಡಲು ಬಹುತೇಕರು ಮಡಿವಂತಿಕೆ ತೋರುತ್ತಾರೆ. ಆದರೆ ಜನಸಂಖ್ಯೆ ಮಾತ್ರ 150 ಕೋಟಿ ತಲುಪಿದೆ. ಇದು ಬದಲಾಗಬೇಕು‌. ಎಲ್ಲರೂ ಈ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಅದರಲ್ಲೂ ಹದಿಹರೆಯದ ಯುವಕ, ಯುವತಿಯರ ಬಳಿ ಯಾವುದೇ ಮುಜುಗರವಿಲ್ಲದೆ ಈ ಬಗ್ಗೆ ಪೋಷಕರೇ ಚರ್ಚೆ ಮಾಡಬೇಕು. ಅವರಿಗೆ ಸೂಕ್ತವಾದ ನಿಖರವಾದ ಮಾಹಿತಿ ನೀಡಬೇಕು. ಅವರ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ಆಗ ಇಂತಹ ಹಲವು ಪ್ರಕರಣಗಳಿಗೆ ಬ್ರೇಕ್ ಹಾಕಬಹುದು.

*ಕೊನೆ ಮಾತು*

ಆರೋಪಿಯ ಕೃತ್ಯ ಯಾರು ಸಹಾ ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕ್ಷಣದಿಂದಲೇ ಸೆಕ್ಸ್ ಎಜುಕೇಷನ್ ಬಗ್ಗೆ ಹೆಚ್ಚು ಒತ್ತು ಕೊಡೋಣ. ಯಾವುದು ಸರಿ ಯಾವುದು ತಪ್ಪು ಅನ್ನೋದನ್ನು ಮೊದಲು ನಾವು ತಿಳಿದುಕೊಳ್ಳೋಣ. ನಂತರ ನಮ್ಮ ಮಕ್ಕಳಿಗೂ ಅದನ್ನು ಮುಕ್ತವಾಗಿ ಮುಜುಗರವಿಲ್ಲದಂತೆ ತಿಳಿಸೋಣ. ಇಂತಹ ವಿಕೃತಿಗಳಿಗೆ ತಿಲಾಂಜಲಿ ಇಡೋಣ. ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share