ಮಾಸ್ಕ್ ಮೇಲಿನ ದ0ಡ ಇಳಿಕೆ ಒತ್ತಡಕ್ಕೆ ಮಣಿದ ಸಿಎಂ

Share

ಬೆಂಗಳೂರು ಕೋವಿಡ್ -19 ಸೋಂಕು ಕರ್ನಾಟಕದಲ್ಲಿ ಕಾಣಿಸಿಕೊಂಡ ದಿನದಿಂದ ಸರ್ಕಾರವು ಸೋಂಕನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ . ಕಾಲಕಾಲಕ್ಕೆ ಕೇಂದ್ರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿಯೂ ಲಾಕ್ ಡೌನ್ ವಿಧಿಸುವುದಲ್ಲದೆ ಕಡ್ಡಾಯವಾಗಿ ಮಾಸ್ಟ್ , ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಆಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ . ಕೋವಿಡ್ -19 ಸೋಂಕನ್ನು ತಡೆಯಲು ಇದುವರೆಗೂ ಯಾವುದೇ ಲಸಿಕೆ ಇರದೇ ಇರುವುದರಿಂದ ಪ್ರಸ್ತುತ ಮಾಸ್ಟ್ ಬಳಕೆ , ಸ್ಯಾನಿಟೈಸರ್‌ನ ಉಪಯೋಗ , ಸಾಮಾಜಿಕ ಅಂತರ ಕಾಯ್ದುಗೊಳ್ಳುವುದು ಅನಿವಾರ್ಯವಾಗಿದೆ . ಇತ್ತೀಚಿನ ಆದೇಶದಲ್ಲಿ ಸರ್ಕಾರವು ನಗರ ಪ್ರದೇಶದಲ್ಲಿ ಮಾಸ್ಟ್ ಬಳಸದಿದ್ದರೆ ರೂ .1,000 / – ದಂಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ .500 / – ದಂಡ ವಿಧಿಸಲು ಕ್ರಮ ತೆಗೆದುಕೊಳ್ಳಲಾಗಿರುತ್ತದೆ . ಆದರೆ ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ದಂಡದ ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ರೂ ಒಂದು ಸಾವಿರ ( ರೂ .1,000 / – ) ದಿಂದ ರೂ ಇನ್ನೂರ ಐವತ್ತು ( ರೂ .250 / – ) ಮತ್ತು ಗ್ರಾಮೀಣಪ್ರದೇಶದಲ್ಲಿ ರೂ . ಐದನೂರು ( ರೂ .500 / – ) ರಿಂದ ರೂ ನೂರು ರೂಪಾಯಿ ( ರೂ .100 / – ) ಗೆ ಇಳಿಸಲು ತೀರ್ಮಾನಿಸಲಾಗಿರುತ್ತದೆ . ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ . ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ರವರು ಹೇಳಿರುವಂತೆ “ ಜೀವ ಮತ್ತು ಜೀವನ ” ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸರ್ಕಾರವು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದು , ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಆಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಸರ್ಕಾರದೊಂದಿಗೆ ಸಹಕರಿಸುವಂತೆ ಕೋರುತ್ತೇನೆ . ( ಬಿ.ಎಸ್ . ಯಡಿಯೂರಪ್ಪ )


Share