ಮುಖಾಮುಖಿ ವತ್ಸ ಅವರನ್ನು ಬೇಟಿಗೆ ರಾಮದಾಸ್ ನಿರಾಕರಣೆ

Share

ಮೈಸೂರು. ಕರ್ನಾಟಕ ರಾಜ್ಯದ ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈಸೂರು ನಗರದ ಕೆಆರ್ ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ರವರನ್ನು ಭೇಟಿ ಮಾಡಲು ಈ ಬಾರಿ ಕಣದಲ್ಲಿರುವ ಶ್ರೀವತ್ಸ ಅವರು ಮುಖಾಮುಖಿ ಭೇಟಿ ಮಾಡಲು ಬಂದಾಗ ರಾಮದಾಸ್ ಅವರಿಗೆ ಅವಕಾಶ ನೀಡಲಿಲ್ಲ.

ಶ್ರೀವತ್ಸರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೈಕಮಾಂಡ್ ರಾಮದಾಸ್ ಅವರನ್ನು ನಿಮ್ಮ ಹೆಸರು ಬದಲಾಗಿ ಬೇರೆಯವರ ಯಾರ ಹೆಸರನ್ನು ಸೂಚಿಸಲು ಇಷ್ಟಪಡುತ್ತೀರಾ ಎಂದು  ಕೇಳಿದಾಗ   ರಾಮದಾಸ್ ರವರು ತಮ್ಮ ಹೆಸರನ್ನು ಸೂಚಿಸಿದರು ಎಂದು ಶ್ರೀವತ್ಸ ತಿಳಿಸಿದರು. ತಮಗೆ ಟಿಕೆಟ್ ದೊರೆಯಲು ಬಿಜೆಪಿ ಪಕ್ಷದ ಹಿರಿಯ  ಯಡಿಯೂರಪ್ಪ ಅವರ ಸಹಕಾರ ಹೆಚ್ಚಾಗಿ ಇದೆ ಎಂದು ಹಾಗೂ ರಾಜ್ಯಾಧ್ಯಕ್ಷರು ಸಾತ್ ನೀಡಿದ್ದಾರೆ ಎಂದು ಶ್ರೀವತ್ಸ ಹೇಳಿದರು
ಹೀಗಾಗಿ ಶ್ರೀಯುತ ರಾಮದಾಸರವರು ತಮ್ಮ ಪರ ಪ್ರಚಾರ. ಮಾಡಿ ಗೆಲ್ಲಲು ಸಾತ್ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶ್ರೀ ವತ್ಸರವರು ತಿಳಿಸಿದರು
ಮುಂದುವರೆದು ಮಾತನಾಡುತ್ತಾ ವೀಕ್ಷಕರ ದೂರವಾಣಿಯಲ್ಲಿ ತಮ್ಮ ಜೊತೆ ಮಾತನಾಡಿರುವುದಾಗಿ ಶ್ರೀ ವತ್ಸಾ ಅವರು ತಿಳಿಸಿದರು ನಾಳೆ ಕಾರ್ಯಕರ್ತರನ್ನು ಸಮಾಧಾನ ಗಳಿಸಿದ ನಂತರ ಹಿರಿಯರನ್ನು ಭೇಟಿ ಮಾಡುವದಾಗಿ ತಿಳಿಸಿದ್ದಾರೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
(ಸಂಸದ ಪ್ರತಾಪ್ ಸಿಂಹ ಹಾಗೂ ನಗರ ಜಿಲ್ಲಾ ಅಧ್ಯಕ್ಷ ಮತ್ತು ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಪಡೆದಿರುವ ಶ್ರೀವತ್ಸಾರ್ ಅವರು ಕಚೇರಿಯಲ್ಲಿ ಭೇಟಿ ಮಾಡಲು ಬಂದಾಗ ಅವರನ್ನು ನಿರಾಕರಿಸಿ ಸೌಜನ್ಯ ತೋರಿಸದೆ ಬಂದ ದಾರಿ ಸುಂಕ ಇಲ್ಲ ಎಂದು ವಾಪಸ್ ಕಳುಹಿಸಿರುವುದು ಶಾಸಕ ರಾಂದಾಸ್ ರವರಿಗೆ ಶೋಭೆ ತರುವಂತದ್ದಲ್ಲ ಏನೇ ಬೇಜಾರಿದ್ದರೂ ರಾಮದಾಸ್ ರವರು ತಮ್ಮ ಬಾಗಿಲ ಬಳಿಗೆ ಬಂದವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಕೆಲವರ ಅನೇಕರ ಅಭಿಪ್ರಾಯ ಕೇಳಿ ಬರುತ್ತಿತ್ತು.(ಸ0)

Share