ಮುಖ್ಯಮಂತ್ರಿಗಳಿಂದ ಪ್ರೋತ್ಸಾಹಧನ ಘೋಷಣೆ

431
Share


ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿರಾಜ್ಯದಲ್ಲಿನ ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿಕಾರ್ಯನಿರ್ವಹಿಸುತ್ತಿರುವುದುಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದನ್ನು ಮನಗಂಡು ಸನ್ಮಾನ್ಯ ಮುಖ್ಯಮಂತ್ರಿಯವರು ಆಶಾ ಕಾರ್ಯಕರ್ತೆಯವರಿಗೆ ಪ್ರೋತ್ಸಾಹ ನೀಡಿ, ನೈತಿಕಆತ್ಮಸ್ಥೈರ್ಯತುಂಬಲು ಆರ್ಥಿಕವಾಗಿ ಪ್ರೋತ್ಸಾಹಧನಘೋಷಣೆ ಮಾಡಿರುತ್ತಾರೆ. ಅದರಂತೆ ಸಹಕಾರಸಂಘಗಳ ವತಿಯಿಂದರಾಜ್ಯದಲ್ಲಿನ ಪ್ರತಿ ಆಶಾ ಕಾರ್ಯಕರ್ತೆಯರಿಗೆತಲಾರೂ. ೩,೦೦೦/-ರಂತೆ ಪ್ರೋತ್ಸಾಹಧನ ನೀಡಲುಕ್ರಮಕೈಗೊಳ್ಳುತ್ತಿರುವುದು ಸರಿಯಷ್ಟೆ.
ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆಉತ್ತೇಜನ ನೀಡುವುದು ನಮ್ಮೆಲ್ಲರಆದ್ಯಕರ್ತವ್ಯಆಗಿರುತ್ತದೆ. ರಾಜ್ಯದಲ್ಲಿಕಾರ್ಯನಿರ್ವಹಿಸುತ್ತಿರುವ ೪೦,೦೦೦ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ನೈತಿಕವಾಗಿಆತ್ಮಸ್ಥೈರ್ಯತುಂಬಲು ಹಾಗೂ ಆರ್ಥಿಕ ಸದೃಢತೆ ಹೊಂದಲುರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಸಲುವಾಗಿ, ಆಯಾ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಈ ಬಗ್ಗೆ ಅರಿವು ಮೂಡಿಸಿ, ಅವರುಗಳಿಗೆ ಆರ್ಥಿಕವಾಗಿ ಸಬಲತೆ ಹೊಂದಲು, ಪ್ರತಿಜಿಲ್ಲೆಯಲ್ಲಿಯೂ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಸಂಬಂಧಪಟ್ಟ ಪ್ರಾಂತೀಯಜಂಟಿ ನಿಬಂಧಕರು, ಉಪನಿಬಂಧಕರು ಹಾಗೂ ಸಹಾಯಕ ನಿಬಂಧಕರುಗಳಿಗೆ ನಿರ್ದೇಶನ ನೀಡಿ, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಕೈಗೊಂಡಕ್ರಮದ ಬಗ್ಗೆ ೧೫ ದಿನಗಳೊಳಗಾಗಿ ಈ ಕಛೇರಿಗೆ ವರದಿಸಲು ಸೂಚಿಸಿದೆ.

                                   (ಎಸ್.ಟಿ.ಸೋಮಶೇಖರ್)

Share