ಮುಖ್ಯಮಂತ್ರಿಗಳಿಂದ ವಲಯವಾರು ಸಭೆ ಆರಂಭ: ಅಧಿಕಾರಿಗಳಿಗೆ ತಾಕೀತು.

ಬೆಂಗಳೂರು ,ನಗರದಲ್ಲಿ ವಲಯವಾರು ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರಂಭಿಸಿದ್ದು ಮೊದಲಿಗೆ ಆರ್. ಆರ್. ನಗರ ಒಲಯದ ಸಭೆಯನ್ನು ನಡೆಸಿದರು.
ಇಂದಿನ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಖಡಕ್ ಸೂಚನೆ ಹಾಗೂ ಎಚ್ಚರಿಕೆ ನೀಡಿದರು.
ಯಾವುದೇ ಕಾರಣದಿಂದ ಆರ್ ಆರ್ ನಗರ ದಲ್ಲಿ ಅಂಬುಲೆನ್ಸ್ ಕೊರತೆಯಾಗಬಾರದು, ರೋಗಿಗಳಿಗೆ ಹಾಸಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಬೆಂಗಳೂರು ನಗರದ ಎಲ್ಲಾ ಕೇಂದ್ರಗಳಲ್ಲಿ ಮೂಲ ಸೌಕರ್ಯ ಒದಗಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.