ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದ ಆಸ್ಪತ್ರೆ ಮಾಲೀಕರು.

Share

ಬೆಂಗಳೂರಿನ,ಖಾಸಗಿ ಆಸ್ಪತ್ರೆಗಳು ನಾಳೆಯೊಳಗೆ 2500 ಹಾಸಿಗೆ ನೀಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಖಾಸಗಿ ಆಸ್ಪತ್ರೆಯ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಇಂದು ಬೆಳಗ್ಗೆ ಆಸ್ಪತ್ರೆ ಮಾಲೀಕರ ಜೊತೆ ಸಭೆ ನಡೆಸಿ ಖಡಕ್ ಸೂಚನೆ ನೀಡಿ ಸಭೆಯಿಂದ ಮುಖ್ಯಮಂತ್ರಿ ಹೊರಗೆ ಬಂದಿದ್ದಾರೆ. ಆಸ್ಪತ್ರೆಯವರಿಗೆ ಬೇರೆ ಸಮಸ್ಯೆ ಇದ್ದರೆ ನಂತರ ಮಾತನಾಡೋಣ ಮೊದಲು ಹಾಸಿಗೆ ನೀಡಿ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಖಾಸಗಿ ಆಸ್ಪತ್ರೆಯ ಮಾಲೀಕರನ್ನು ಸಚಿವರ ತಂಡ ಮನವೊಲಿಸಿ ಖಾಸಗಿ ಆಸ್ಪತ್ರೆ ಮಾಲೀಕರು 1500, ಹಾಸಿಗೆಯನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಎರಡನೇ ಹಂತವಾಗಿ ಉಳಿದ ಸಾವಿರ ಹಾಸಿಗೆಗಳನ್ನು ಮುಂದಿನ ದಿನಗಳಲ್ಲಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.


Share