ಮುಖ್ಯಮಂತ್ರಿ B.S.Y ಗೃಹಬಂಧನದಲ್ಲಿ!

ಸ್ವತಃ ದಿಗ್ಬಂಧನಕ್ಕೆ ಒಳಗಾದ ಯಡಿಯೂರಪ್ಪ -ಮೈಸೂರಿನ ಅರಮನೆ ಆಯ್ತು ಈಗ ಸ್ವತಃ ಸಿಎಂ ಗೃಹ ಕಚೇರಿ ದೇವಳಗಿರಿಗೆ ವಕ್ಕರಿಸಿದೆ ಕರೋನಾ ಕಂಟಕ .ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ದಿಗ್ಬಂಧನಕ್ಕೆ ಅಂದರೆ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗಬೇಕಾಗಿದೆ . ಯಡಿಯೂರಪ್ಪ ಅವರ ಕಾರ್ ಡ್ರೈವರ್ ,ಅಡಿಗೆ ಬಟ್ಟ ಸೇರಿದಂತೆ ಹತ್ತು ಜನರಿಗೆ ಕರೋನಾ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದ ತಕ್ಷಣ, ಇಡೀ ಸಿಎಂ ನಿವಾಸವನ್ನೇ ದಿಗ್ ಬಂಧನಕ್ಕೊಳಗಾಗಿಸಿದೆ.ಮುಖ್ಯಮಂತ್ರಿಗಳು ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ .ಆಪ್ತ ಸಹಾಯಕ ಸಹಾಯಕರನ್ನು ಹೊರತುಪಡಿಸಿ ಇನ್ಯಾರನ್ನೂ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ .ತೀರಾ ಅಗತ್ಯ ಬಿದ್ದರೆ, ತುರ್ತು ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಅಥವಾ ಟೆಲಿಫೋನ್ ಮುಖಾಂತರ ಸಂಪರ್ಕಿಸುವುದಾಗಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಚಿವರುಗಳಿಗೆ ತಿಳಿಸಿದ್ದಾರೆ .ಇಂದು ಮುಂಜಾನೆಯಿಂದಲೇ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ತೀವ್ರ ರೀತಿಯ ಸ್ಯಾನಿಟೈಸೆಷನ್ ಕಾರ್ಯ ನಡೆಯುತ್ತಿದೆ .ಇದೀಗ ಬಂದಿರುವ ವರದಿಯಂತೆ ಮುಖ್ಯಮಂತ್ರಿಗಳು ಒಂದು ವಾರಗಳ ಕಾಲ ಸೆಲ್ಫ್ ಕ್ವಾರಂಟೈನ್ಗೆ ಒಳಗಾಗುವುದಾಗಿ ತಿಳಿಸಿದ್ದಾರೆಂದು ವರದಿಯಾಗಿದೆ. ಮುಖ್ಯಮಂತ್ರಿ ನಿವಾಸದ ಪೊಲೀಸರು ಮೊದಲುಗೊಂಡು ಎಲ್ಲರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ. ಮುಖ್ಯಮಂತ್ರಿ ಗೃಹ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ .ಫಾರ್ಚುನರ್ ಕಾರಿನ ಚಾಲಕನಿಗೆ ಸೋಂಕು ತಗಲಿರುವುದಾಗಿ ತಿಳಿದುಬಂದಿದೆ. ಮುಖ್ಯವಾಗಿ ಕಾರಿನ ಚಾಲಕ ಮುಖ್ಯಮಂತ್ರಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.