ಮುಖ್ಯಮಂತ್ರಿ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಆರಂಭಿಸಿದ ಕಿಚ್ಚ ಸುದೀಪ್

Share

ಕನ್ನಡದ ಕಿಚ್ಚ ಸುದೀಪ್ ರವರು ಇಂದು ಮುಖ್ಯಮಂತ್ರಿ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ಅವರು ಮುಖ್ಯಮಂತ್ರಿಗಳೊಂದಿಗೆ ರೋಡ್ ಶೋ ಮಾಡಿ ನಂತರ ಮಾತನಾಡಿದರು. 

ಅವರು ಹೇಗಿದ್ದೀರ ಎಂದು ಜನಸಾಗರವನ್ನು ಉದ್ದೇಶಿಸಿ ಮೊದಲು ಮಾತನಾರಂಭಿಸಿದರು. ತಮ್ಮನ್ನು ಸ್ವಾಗತಿಸಿದ ಜನತೆಗೆ ಅಭಿನಂದನೆ ತಿಳಿಸಿ ಬೊಮ್ಮಾಯಿಯವರಿಗೆ ಕೆಲಸ ಮಾಡಲು ಸಮಯ ಬಹಳ ಕಡಿಮೆ ಸಿಕ್ಕಿದೆ. ಅವರಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಕೋರಿದರು. ಜೆ ಪಿ ನಡ್ಡ ಅವರಿಗೆ ಸ್ವಾಗತಿಸಿ ತಾವು ಭಾರತದ ಪ್ರಜೆಯಾಗಿ ಪ್ರಧಾನಿ ಮೋದಿಯವರ ಅಭಿವೃದ್ಧಿಯನ್ನು ಶ್ಲಾಘಿಸಿದರು . ತಾವು ವಿದೇಶಗಳಿಗೆ ತೆರಳಿದ್ದಾಗ ಅಲ್ಲಿ ಜನರು ಮೋದಿಯವರ ಬಗ್ಗೆ ಅಪಾರ ವಿಶ್ವಾಸವಿದೆ ಎಂದರು. ತಮಗೂ ಅಭಿವೃದ್ಧಿ ಆಗೇ ಆಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಮಾತ್ರ ತಾವು ಪ್ರಚಾರಕ್ಕಾಗಿ ತೊಡಗಿರುವುದಾಗಿ ಹೇಳಿ ತಮ್ಮ ಸಿನಿಮಾದ ಹಾಡಿನ ಒಂದು ಸಾಲು ‘ ನಾವು ಗೆದ್ದೇ ಗೆಲ್ಲುತ್ತೇವೆ , ಗೆಲ್ಲುತ್ತದೆ ಒಳ್ಳೆತನ ‘ ಎಂದು ಹೇಳಿ ತಮ್ಮ ಚಿಕ್ಕ ಭಾಷಣವನ್ನು ಮುಗಿಸಿದರು.

ಗಮನಿಸಬೇಕಾದ ಒಂದು ವಿಷಯವೆಂದರೆ ಕಿಚ್ಚರವರು ಅತಿ ಜಾಗರೂಕರಾಗಿ ಮೋದಿ ಹಾಗೂ ಬೊಮ್ಮಾಯಿ ಹೆಸರನ್ನು ಮಾತ್ರ ಬಳಸಿದರು. ಎಲ್ಲೂ ಬಿಜೆಪಿ ಹೆಸರನ್ನು ತೆಗೆದುಕೊಳ್ಳಲಿಲ್ಲ. ಹಾಗೂ ವಿರೋಧ ಪಕ್ಷವನ್ನು ಟೀಕಿಸಲಿಲ್ಲ.


Share