ಮೃಗಾಲಯಕ್ಕೆ ಸಚಿವರಿಂದ ದೇಣಿಗೆ

349
Share

ಮೈಸೂರು ಮೃಗಾಯಲಕ್ಕೆ ಇಂದು 1.5 ಕೋಟಿ ರೂ. ದೇಣಿಗೆ

  • ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ 21.14 ಲಕ್ಷ ರೂಪಾಯಿ ಚೆಕ್ ವಿತರಣೆ
  • ನಗರಾಭಿವೃದ್ಧಿ ಸಚಿವರಿಂದ 84 ಲಕ್ಷ ಚೆಕ್ ವಿತರಣೆ
  • ಸಚಿವರಿಂದ 2ನೇ ಬಾರಿಗೆ 45.30 ಲಕ್ಷ, ಪ್ರಥಮ ಬಾರಿಗೆ 73.60 ಲಕ್ಷ ರೂ. ನೀಡಲಾಗಿತ್ತು
  • ಒಟ್ಟಾರೆ 2.32 ಕೋಟಿ ರೂಪಾಯಿ ಹಸ್ತಾಂತರ

ಮೈಸೂರು: ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗೋಸ್ಕರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 3ನೇ ಹಂತವಾಗಿ ಗುರುವಾರ 21.14 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ, ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು ಅವರು 84 ಲಕ್ಷ ರೂಪಾಯಿ ಚೆಕ್ ಅನ್ನು ಸಚಿವ ಸೋಮಶೇಖರ್ ಅವರ ಮೂಲಕ ಮೃಗಾಲಯಕ್ಕೆ ಹಸ್ತಾಂತರಿಸಿದರು.

ಈ ಮೂಲಕ ಗುರುವಾರ ಒಂದೇ ದಿನ ಮೃಗಾಲಯಕ್ಕೆ ಒಟ್ಟಾರೆ 1,05,14,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದಂತಾಗಿದೆ.

ಒಟ್ಟಾರೆ 2.32 ಕೋಟಿ ರೂ. ಕೊಡುಗೆ

ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಇದುವರೆಗೆ ತಮ್ಮ ಕ್ಷೇತ್ರ ಹಾಗೂ ಇತರ ಸಚಿವರಿಂದ ಮೃಗಾಲಯಕ್ಕೆ ಒಟ್ಟಾರೆಯಾಗಿ 2,31,60,000 ರೂಪಾಯಿಯನ್ನು ದೇಣಿಗೆಯಾಗಿ ನೀಡಿದಂತಾಗಿದೆ.


Share