ಮೆ 19 ರಿಂದ ಮೈಸೂರು ತಾಲ್ಲೂಕಿನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ದೂರು ಸ್ವೀಕಾರ

ಮೈಸೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕು ಭೇಟಿ

ಮೈಸೂರು :- ಮೈಸೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ, ಸಾರ್ವಜನಿಕ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಅಧಿಕೃತ ಕೆಲಸಗಳ ಅನಗತ್ಯ ವಿಳಂಬ, ಲಂಚದ ಬೇಡಿಕೆ ಇತ್ಯಾದಿ ತೊಂದರೆಗಳ ಸಂಬಂಧ ಮೈಸೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಮೇ 19 ರಿಂದ 29ರವರೆಗೆ ತಾಲ್ಲೂಕುಗಳಿಗೆ ಭೇಟಿ ಮಾಡುತ್ತಿದ್ದು, ಆಯಾ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ದೂರುಗಳಿದ್ದಲ್ಲಿ ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅಡಿಯಲ್ಲಿ ಕ್ರಮಬದ್ಧವಾಗಿ ಭರ್ತಿಮಾಡಿದ ದೂರುಗಳನ್ನು ನಮೂನೆ 1ರಲ್ಲಿ ಮತ್ತು 2ರಲ್ಲಿ ಪ್ರಮಾಣಪತ್ರಗಳನ್ನು ಅಗತ್ಯ ದಾಖಲಾತಿಗಳೊಡನೆ ನೀಡಬಹುದು ಎಂದು ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಲೋಕಾಯುಕ್ತ ಅಧಿಕಾರಿಗಳು ಮೇ 19 ಮತ್ತು 20 ರಂದು ಮೈಸೂರು ನಗರದ ದಿವಾನ್ಸ್ ರಸ್ತೆಯಲ್ಲಿರುವ ಪೊಲೀಸ್ ಅಧೀಕ್ಷರ ಕಚೇರಿ, ಕರ್ನಾಟಕ ಲೋಕಾಯುಕ್ತ ಇಲ್ಲಿ ದೂರು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ 21 ರಂದು ಟಿ.ನರಸೀಪುರ ತಾಲ್ಲೂಕಿನ, ತಾಲ್ಲೂಕು ಕಚೇರಿ ಆವರಣ, ಮೇ 22 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಪಿಡಬ್ಲೂಡಿ ಅತಿಥಿ ಗೃಹ ಕಚೇರಿ, ಮೇ 26 ರಂದು ಪರಿಯಾಪಟ್ಟಣ ತಾಲ್ಲೂಕಿನ ಪಿಡಬ್ಲೂಡಿ ಅತಿಥಿ ಗೃಹ ಕಚೇರಿ, ಮೇ 27 ರಂದು ಹುಣಸೂರು ತಾಲ್ಲೂಕಿನ ಪಿಡಬ್ಲೂಡಿ ಅತಿಥಿ ಗೃಹ ಕಚೇರಿ, ಮೇ 28 ರಂದು ನಂಜನಗೂಡು ತಾಲ್ಲೂಕಿನ ತಾಲ್ಲೂಕು ಕಚೇರಿ ಆವರಣ ಹಾಗೂ ಮೇ 29 ರಂದು ಕೆ.ಆರ್.ನಗರ ತಾಲ್ಲೂಕಿನ ಪಿಡಬ್ಲೂಡಿ ಅತಿಥಿ ಗೃಹ ಕಚೇರಿ ಇಲ್ಲಿಗೆ ಭೇಟಿ ನೀಡುವರು.