ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಣೆ

434
Share

ಮೈಸೂರಿನ ಕಲಾಪ್ರೇಮಿಗಳಿಂದ ಅಕಾಲಿಕ ನಿಧನರಾದ ಚಿತ್ರನಟ ಚಿರಂಜೀವಿ ಸರ್ಜ ರವರಿಗೆ ಅಗ್ರಹಾರ ವೃತದಲ್ಲಿ ಮೇಣದಬತ್ತಿ ಇಡಿದು ಶ್ರದ್ಧಾಂಜಲಿ ಸಲ್ಲಿಸಿದರು.
ತಮ್ಮ ನೆಚ್ಚಿನ ನಟರನ್ನು ಕಳೆದು ಕೊಂಡು ಮಾತನಾಡಿದ ಹರೀಶ್ ನಾಯ್ಡು ಮಾತನಾಡಿ ಪದಗಳೇ ಬರದ ಪರಿಸ್ಥಿತಿ ಒಮ್ಮೊಮ್ಮೆ ನಮ್ಮ ವೃತ್ತಿ ಬದುಕಿನಲ್ಲಿ ಆಗ್ತಿರುತ್ತೆ…ಅದರ ಸಾಲಿಗೆ ಚಿರ ನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ ಅಂತಿಮ ಪಯಣ ಕೂಡ ಒಂದು…ನಿನ್ನೆಯಿಂದ ಯಾವ ರೀತಿಯಲ್ಲೂ ಅವರ ಬಗ್ಗೆ ಹೇಳೋಕೆ ಆಗ್ತಿಲ್ಲ…ಈ ದೃಶ್ಯ ಇಷ್ಟು ಬೇಗ ಪ್ರೀತಿ ತುಂಬಿದ ಮಡದಿ ಮೇಘನಾಗೆ ಬರಬಾರದಿತ್ತು..ಮತ್ಯಾರಿಗೂ ಮರುಕಳಿಸದಿರಲಿ ಅನ್ನೋ ಆಶಯದೊಂದಿಗೆ ಚಿರಂಜಿವಿ ಸರ್ಜಾ ಆತ್ಮಕ್ಕೆ ಶಾಂತಿ ಸಿಗಲಿ.
ಎಲ್ಲವನ್ನೂ ಪದಗಳಲ್ಲಿ ವರ್ಣಿಸೋಕೆ ಆಗಲ್ಲ ಎಂದು ತಮ್ಮ ದುಃಖವನ್ನು ತೋರ್ಪಡಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ,ಅಭಿಮಾನಿ ಬಳಗದ ಹರೀಶನಾಯ್ಡು,
ಯುವ ಮುಖಂಡರಾದ ಜಯಸಿಂಹ ಶ್ರೀಧರ್,ಗುರುರಾಜ್ ನಾಯ್ಡು,ಕಡಕೊಳ ಜಗದೀಶ್, ಗ್ಯಾರೇಜ್ ಶಿವು, ಮಂಜುನಾಥ್, ಸಾತ್ವಿಕ್ ,ಗಣೇಶ್ ಪ್ರಸಾದ್, ಕುಮಾರ ಹಾಗೂ ಇನ್ನಿತರರು ಹಾಜರಿದ್ದರು


Share