ಮೇಣದ ಬತ್ತಿ ಹಿಡಿದು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Share

ಮೈಸೂರು ಪಾತಿ ಫೌಂಡೇಷನ್ ವತಿಯಿಂದ ಗಾನ ನಿಲ್ಲಿಸಿದ ಗಾನ ಕೋಗಿಲೆ ಎಸ್ ಪಿ ಬಾಲಸುಬ್ರಹ್ಮಣ್ಯ ಅವರಿಗೆ ಮೇಣದ ಬತ್ತಿ ಹಿಡಿದು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅಗ್ರಹಾರ ವೃತ್ತದಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಯಿತು
ಸಂತಾಪ ಸಭೆಯಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಎಂಡಿ ಪಾರ್ಥಸಾರಥಿ ಮಾತನಾಡಿ ಕೆಲವರಿಗೆ ಸಾವಿಲ್ಲ, ಎದೆ ತುಂಬಿ ಹಾಡಿರುವ ಆ 50 ಸಾವಿರ ಹಾಡುಗಳ ಮೂಲಕ ಪ್ರತಿಕ್ಷಣ ಪ್ರಪಂಚದ ಯಾವುದೋ ಮೂಲೆಯಲ್ಲಿ ಯಾರ ಕಿವಿಯಲ್ಲಿಯೋ, ಬಾಯಿಯಲ್ಲಿಯೋ ಆ ಧ್ವನಿ ಜೀವಂತವಾಗಿ ಇದ್ದೇ ಇರುತ್ತದೆ.
ಜೀವಂತ ದಂತ ಕಥೆಯಾಗಿ ಬದುಕಿದರು ಜೀವಂತ ದಂತ ಕಥೆಯಾಗಿಯೇ ನಿರ್ಗಮನ ಮಾಡಿದ್ದಾರೆ ಅವರ ನಿರ್ಗಮನಕ್ಕೆ ಎದೆ ತುಂಬಿ ಬಿಳ್ಕೋಡುಗೆ ನೀಡೋಣ
ಇದೇ ಸಂದರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಎಂಡಿ ಪಾರ್ಥ ಸಾರಥಿ ,ಅಗಸ್ತ್ಯ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷರಾದ ಸಿವಿ ಪಾರ್ಥಸಾರಥಿ ,ಕನ್ನಡ ಹೋರಾಟಗಾರರಾದ ತಾಯೂರು ವಿಠಲಮೂರ್ತಿ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ,ಕಡಕೊಳ ಜಗದೀಶ್ ,ಹರೀಶ್ ನಾಯ್ಡು, ರಾಕೇಶ್ ಭಟ್,ರಂಗನಾಥ್, ಎಸ್ ಎನ್ ರಾಜೇಶ್ ,ಚಕ್ರಪಾಣಿ ,ದೀಪಕ್ ,ಪ್ರಜ್ವಲ್ ,ಸನತ್ , ರಾಕ್ ,ಪ್ರದೀಪ್ ಹಾಗೂ ಇನ್ನಿತರರು ಹಾಜರಿದ್ದರು


Share