ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ : ವೀಕ್ಷಿಸಿ

165
Share

ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ.
ನೆನ್ನೆ ಅಂದರೆ ದಿನಾಂಕ 11.05.24 ರಂದು ಮೇಲುಕೋಟೆಯಲ್ಲಿ 1007ನೇ ಜಯಂತಿ ಅಂಗವಾಗಿ ರಾಮಾನುಜಾಚಾರ್ಯರಿಗೆ ವಿಜೃಂಭಣೆಯಿಂದ ಮಹಾ ರಥೋತ್ಸವವೂ ನಡೆಯಿತು. ದೇವಸ್ಥಾನದಲ್ಲಿ ರಾಮಾನುಜಾಚಾರ್ಯರಿಗೆ ಸುಮಾರು ಬೆಳಗ್ಗೆ 9 ಗಂಟೆಗೆ ವೇದಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ದೇವಸ್ಥಾನದ ಒಳ ಪ್ರಕಾರದಲ್ಲಿಯೇ ಉತ್ಸವ ನಡೆದು ನಂತರ ರಾಮಾನುಜಾಚಾರ್ಯರ ಎದುರು ಸೇವೆಯಲ್ಲಿ ಚೆಲುವನಾರಾಯಣ ಸ್ವಾಮಿಗೆ ಮಂಗಳಾರತಿ ನೆರವೇರಿತು. ನಂತರ ಉತ್ಸವವು ರಥದ ಮಂಟಪದ ಬಳಿ ಬಂದು ರಥ ಮಂಟಪಕ್ಕೆ ಮೂರು ಪ್ರದಕ್ಷಿಣೆ ಮಾಡುವಾಗ ಅರ್ಚಕರಿಂದ ಮುಹೂರ್ತ ಪಟ್ಟಣವಾದ ಮೇಲೆ ರಥಾರೋಹಣ ಕಾರ್ಯಕ್ರಮ ನೆರವೇರಿತು. ತದನಂತರ 11:30 ಗಂಟೆಗೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಾದ ಶ್ರೀ ಯತಿರಾಜ ಸಂಪತ್ ಕುಮಾರನ್ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್ಎಸ್ ಮಹೇಶ್ ರವರು ಮೊದಲು ಸರಪಣಿ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ರಥೋತ್ಸವದ ಧಾರ್ಮಿಕದ ವಿಧಿ ವಿಧಾನಗಳನ್ನು ಅರ್ಚಕರಾದ ಶ್ರೀ ಬಿವಿ ಆನಂದಾಳ್ವಾರ್ ಹಾಗೂ ವಿದ್ವಾನ್ ಭಾವಂ ರಾಮಪ್ರಿಯ ರವರು ನೆರವೇರಿಸಿದರು.
ರಾಮಾನುಜಾಚಾರ್ಯರ ತಿರುನಕ್ಷತ್ರ ಇಂದು ಬೆಳಿಗ್ಗೆ 9:00ಗೆ ದ್ವಾದಶ ಆರಾಧನೆಯೊಂದಿಗೆ ರಾಮಾನುಜಾಚಾರ್ಯರಿಗೆ ಮಹಾ ಅಭಿಷೇಕ ನೆರವೇರಿತು. ನಂತರ ಸಾಯಂಕಾಲ ಗಂಧದಲ್ಲಿ ಅಲಂಕಾರ ಮಾಡಿ ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವವು ನಡೆಯುವುದು ಇದಾದ ನಂತರ ರಾತ್ರಿ ಚೆಲುವನಾರಾಯಣ ಸ್ವಾಮಿಯವರ ದಶಾವತಾರ, ವೈಷ್ಣವ ಸಂಪ್ರದಾಯದಂತೆ ಪೂಜಾ ಪುನಸ್ಕಾರಗಳು ನಡೆಯುವುದು. ಇದು ಸುಮಾರು ರಾತ್ರಿ ಎರಡು ಗಂಟೆ ತನಕ ನಡೆಯುವುದು. ನಂತರ ಪ್ರಸಾದ ವಿನಿಯೋಗ ನಡೆಯುವುದು.


Share