ಮೇಲುಕೋಟೆ ವೈರಮುಡಿ ವಿಶೇಷ : ರಥೋತ್ಸವ

Share

 

 

ಇಂದು ಚೆಲುವರಾಯಸ್ವಾಮಿ ಶ್ರೀ ಭೂದೇವಿ ಕಲ್ಯಾಣ . ನಾಯಕಿ ಸಹಿತ ಬೆಳ್ಳಿ ಪೀಠದಲ್ಲಿ ಕೂರಿಸಿ ವಿಜೃಂಭಣೆಯಿಂದ ದೇವಸ್ಥಾನದ ಸುತ್ತ ಒಂದು ಸುತ್ತು ರಥೋತ್ಸವ ನಡೆಯಿತು. ರಥದ ಬಳಿ ಆಸ್ಥಾನ ಪುರೋಹಿತರಿಂದ ವಾಚನದ ನಂತರ ರಥಾರೋಹಣ , ತೀರ್ಥ ವಿನಿಯೋಗವಾದಮೇಲೆ ರಥೋತ್ಸವ ಪ್ರಾರಂಭವಾಯಿತು. ರಥೋತ್ಸವದಲ್ಲಿ ನೂರಾರು ಜನ ಭಕ್ತಾದಿಗಳು ಹರಿಕೆ ಹೊತ್ತವರು ಮಕ್ಕಳಿಂದ ಹಿಡಿದು ವಯೋವೃದ್ಧರು ಸಾಧ್ಯವಾದಷ್ಟು ದೂರ ರಥೋತ್ಸವಕ್ಕೆ ತಮ್ಮ ಕೈಗಳನ್ನು ಕೂಡಿಸಿ ಭಕ್ತಿಯಿಂದ ಚೆಲುವರಾಯನಿಗೆ ಜಯಕಾರಗಳನ್ನು ಕೂಗುತ್ತಾ ಭಾಗವಹಿಸಿದರು . ಇದಾದ ನಂತರ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಹೂವಿನ ಪಲ್ಲಕ್ಕಿ ಉತ್ಸವ ಸೇವೆ ಒಂದು ವರ್ಗದ ಜನರಿಂದ ನಡೆಯಲಿದೆ.


Share