ಮೇಲುಕೋಟೆ ವೈರಮುಡಿ : 6 ನೇ ತಿರುನಾಳ್ ಉತ್ಸವ

Share

 

ಇಂದು ಆರನೇ ತಿರುನಾಳು. ಬೆಳಿಗ್ಗೆ ಉತ್ಸವ, ನಂತರ ಸಾಯಂಕಾಲ ಚಿನ್ನದ ಗರುಡನ ಮೇಲೆ ಕುಳಿತು ಅಲಂಕೃತವಾಗಿ ಕಲ್ಯಾಣಿ ಬಳಿ ಗಜೇಂದ್ರ ಮೋಕ್ಷ ನಡೆಯಿತು. ತದನಂತರ ದೇವಾಲಯಕ್ಕೆ ಮುಖ್ಯ ಬೀದಿಯಲ್ಲಿ ಉತ್ಸವವನ್ನು ಕೊಂಡೊಯ್ಯ್ದು ಮತ್ತೆ ರಾತ್ರಿ ಅಲಂಕಾರ ಬದಲಾವಣೆಯಾದ ನಂತರ ದೇವರ ಸನ್ನಿಧಿಯಲ್ಲಿ ವಸಂತ ನಡೆಯುತ್ತದೆ. ಬಳಿಕ ಕುದುರೆ ಆನೆ ವಾಹನದ ಉತ್ಸವ ನಡೆಯಲಿದೆ. ಐದನೇ ತಿರುನಾಳಿನಂತೆ ಪಡಿಯೆತ್ತ ( ಪಡಿಯೆತ್ತ ಅಂದರೆ ಮೆಟ್ಟಲೇರಿ ಬರುವುದಕ್ಕೆ ಪಡೆಯೆತ್ತವೆನ್ನುತ್ತಾರೆ ). ಹಾಗೆಯೇ ಅಮ್ಮನವರ ಸನ್ನಿಧಿಗೆ ವಿಜಯ ಮಾಡಿಸುತ್ತಾರೆ. ಐದನೆಯದು ಮತ್ತು ಆರನೆಯ ಪಡಿಯೆತ್ತಗಳು ತುಂಬಾ ವಿಶೇಷವಾಗಿರುತ್ತದೆ.

Share