ಮೈಸೂರಲ್ಲಿ 6 ರಿಂದ 5ರ ವರೆಗೆ ಕರ್ಫ್ಯೂ ಜಾರಿಗೆ

ಮೈಸೂರು ನಗರದಲ್ಲಿಂದು 6ಗಂಟೆಗೆ ಕರ್ಫ್ಯೂ ಜಾರಿಗೆ ತರಲಾಯಿತು
ಹೀಗಾಗಿ ನಗರದಾದ್ಯಂತ ವಾಹನ ಸಂಚಾರ ಆರು ಗಂಟೆ ವೇಳೆಗೆ ಬಹುತೇಕ ಕಡಿಮೆಯಾಗಿತ್ತು.
ಯಾವುದೇ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿರಲಿಲ್ಲ ಪೊಲೀಸರು ಸೈರನ್ ಮಾಡಿಕೊಂಡು ರಸ್ತೆಯಲ್ಲಿ ತೆರಳಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದರು ಪ್ರಮುಖ ರಸ್ತೆಗಳಲ್ಲಿ ಔಷಧಿ ಅಂಗಡಿ ಹಾಲಿನ ಕೇಂದ್ರ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.

ಸಂಜೆ 6 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕಫ್ರ್ಯೂ: ನಗರ ಪೊಲೀಸ್ ಆಯುಕ್ತರು
ಮೈಸೂರು, – ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 3 ರಿಂದ ಮುಂದಿನ ಆದೇಶದ ವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕಫ್ರ್ಯೂ ಜಾರಿಯಲ್ಲಿರುತ್ತದೆ. ಹಾಗೂ ಜುಲೈ 05 ರಿಂದ ಆಗಸ್ಟ್ 02 ವರೆಗಿನ ಎಲ್ಲಾ ಭಾನುವಾರಗಳಂದು ಪೂರ್ಣದಿನದ ಲಾಕ್‍ಡೌನ್ ಮಾಡಲಾಗುತ್ತಿದ್ದು, ಅಗತ್ಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.
ಈ ಆದೇಶವು ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳು, ಹಾಪ್‍ಕಾಮ್ಸ್ ಪಡಿತರ, ಆಹಾರ ಪದಾರ್ಥಗಳ ಹೋಂ ಡೆಲಿವರಿಗಾಗಿ ಕಿಚನ್ ಸೇವೆಗಳು(ರಾತ್ರಿ 9 ಗಂಟೆವರೆಗೆ ಮಾತ್ರ ಅವಕಾಶ) ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯಿಸುವುದಿಲ್ಲ
ಸಾರ್ವಜನಿಕ ಸ್ಥಳಗಳು, ಕಚೇರಿಗಳು ಮತ್ತು ಹೊರಗೆ ಪ್ರಯಾಣಿಸುವ ವೇಳೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲವಾದಲ್ಲಿ 200 ರೂ. ದಂಢ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿರುತ್ತಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಕಡ್ಡಾಯವಾಗಿ 6 ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವ್ಯಾಪಾರ ಮಳಿಗೆಗಳ ಬಳಿ ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಮಳಿಗೆದಾರರ ಜವಾಬ್ದಾರಿ. ಒಂದು ವೇಳೆ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದಲ್ಲಿ ಮಳಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಒಳಗೊಂಡಂತೆ ಕಾನೂನು ಕ್ರಮ ಜರುಗಿಸುವುದುಗಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು. ಬೃಹತ್ ಸಾರ್ವಜನಿಕ ಸಭೆಗಳು ಹಾಗೂ ಒಟ್ಟುಗೂಡುವಿಕೆಗಳನ್ನು ನಿಷೇಧಿಸಲಾಗಿದ್ದು, ಮದುವೆಗಳಿಗೆ ಸಂಬಂಧಿಸಿದಂತೆ 50 ಜನರು ಮತ್ತು ಅಂತ್ಯಕ್ರಿಯೆಗಳಿಗೆ 20 ಜನರÀನ್ನು ಮೀರದಂತೆ ಎಚ್ಚರ ವಹಿಸುವುದು.
ಕೆಲಸದ ಸ್ಥಳಗಳಲ್ಲಿ ಎಲ್ಲಾ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಕೈತೊಳೆಯುವ ವ್ಯವಸ್ಥೆ ಮತ್ತು ಸ್ಯಾನಿಟೈಸರ್‍ಗಳನ್ನು ಕಡ್ಡಾಯವಾಗಿ ಬಳಸಬೇಕು. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಮನೆಯಿಂದ ಹೊರಬಾರದಂತೆ ನಗರ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ