ಮೈಸೂರಿಗೆ ಇಂದು ಗೃಹ ಸಚಿವ ಅಮಿತ್ ಷಾ

250
Share

 

*ಕೇಂದ್ರ ಗೃಹ ಸಚಿವರ ಮೈಸೂರು ಜಿಲ್ಲಾ ಪ್ರವಾಸ*
ಮೈಸೂರು.:- ಕೇಂದ್ರ ಗೃಹ ಸಚಿವರು ಹಾಗೂ ಸಹಕಾರಿ ಸಚಿವರಾದ ಅಮಿತ್ ಶಾ ಅವರು ಫೆಬ್ರವರಿ 10 ಹಾಗೂ 11ರಂದು ಮೈಸೂರು ಜಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳಳಲಿದ್ದಾರೆ

ಫೆಬ್ರವರಿ 10 ರ ರಾತ್ರಿ 10.50 ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಫೆಬ್ರವರಿ 11ರ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ತೆರಳುವ ಅವರು ನಂತರ ಮಧ್ಯಾಹ್ನ 12 ಗಂಟೆಗೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 4.55 ಕ್ಕೆ ಮೈಸೂರಿನಿಂದ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Share