ಮೈಸೂರಿಗೆ ಬೆಂಬಿಡದ ಕೊರೋನಾ ಕಾಟ : ಹಾಂಕಾಂಗ್ ಬಝಾರ್ ಬಳಿ ಲಾಕ್!!

Share

ಮೈಸೂರಿನ ಕೊತ್ವಾಲ್ ರಾಮಯ್ಯ ಬೀದಿ ಸೀಲ್ -ಮೈಸೂರಿನ ಸುಪ್ರಸಿದ್ಧ ಕೊತ್ವಾಲ್ ರಾಮಯ್ಯ ಬೀದಿಯಲ್ಲಿ ಕೆಲವರಲ್ಲಿ ಕರೋನಾ ವೈರಾಣು ಕಾಣಿಸಿಕೊಂಡಿದೆ ಎಂಬ ಕಾರಣ ತಕ್ಷಣದಿಂದಲೇ ಆ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇಂದು ಮುಂಜಾನೆಯಿಂದ ಬ್ಯಾರಿಕೇಟ್ ಬಳಿ ಬಂದವರಿಗಷ್ಟೇ ಹಾಲನ್ನು ವಿತರಿಸಲಾಗುತ್ತಿರುವ ದೃಶ್ಯ ಕಂಡು ಬಂದಿತು .ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು ಈ ರಸ್ತೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯುವ ಹಾಗಿಲ್ಲ .ಈ ರಸ್ತೆಯನ್ನು ಎಷ್ಟು ದಿನ ಸೀಲ್ ಡೌನ್ ಮಾಡಬೇಕೆಂಬುದನ್ನು ಜಿಲ್ಲಾಡಳಿತ ಸದ್ಯದಲ್ಲೇ ತೀರ್ಮಾನಿಸಲಿದೆ.


Share