ಮೈಸೂರಿನಲ್ಲಿ ಏಕಿಲ್ಲ ಪ್ಲಾಸ್ಮಾ ಬ್ಯಾಂಕ್? ಕೇಳುತ್ತಿದ್ದಾರೆ ಆಮ್ ಆದ್ಮಿ

Share

ಮೈಸೂರಿನಲ್ಲಿ ಏಕಿಲ್ಲ ಪ್ಲಾಸ್ಮಾ ಬ್ಯಾಂಕ್? ಕೇಳುತ್ತಿದ್ದಾರೆ ಆಮ್ ಆದ್ಮಿ

ರಕ್ತದಾನದಂತೆ ಸರಳ ಪ್ರಕ್ರಿಯೆ, ಓರ್ವ ದಾನಿ ಇಬ್ಬರ ಜೀವ ಉಳಿಸಬಹುದು.

ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಾಲವಿಕ ಗುಬ್ಬಿವಾಣಿ ಅವರು ಜಿಲ್ಲಾಧಿಕಾರಿಗಳಿಗೆ ಮೈಸೂರಿನಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿ, ಅದನ್ನು ಜನಪ್ರಿಯಗೊಳಿಸಬೇಕೆಂದು ಎಂದು ಆಗ್ರಹಿಸಿದ್ದಾರೆ. ಈಗಲೂ ಸರಕಾರದ ಅರಿವು ಕಾರ್ಯಕ್ರಮ ಕೇವಲ ಮಾಸ್ಕ್ ಧಾರಣೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಮಾತ್ರ ಹೇಳುತ್ತಿದೆಯೇ ಹೊರತು ಅದಕ್ಕಿಂತ ಮುಂದೆ ಸಾಗಿಲ್ಲ. ಮೈಸೂರಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 20,000 ದಾಟಿದ್ದು ಈಗಾಗಲೇ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಮೈಸೂರಿನ ಸಿ.ಎಫ್.ಆರ್. 2.5% ದಾಟಿದ್ದು ಇದು ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಾಗಿದೆ.

ದೆಹಲಿಯ ಪ್ಲಾಸ್ಮಾ ಥೆರಪಿಯ ಯಶೋಗಾಥೆ – ನೂರಾರು ದಾನಿಗಳು, ಸಾವಿರಾರು ಸೋಂಕಿತರ ಜೀವರಕ್ಷೆ. ಜೂನ್ ತಿಂಗಳಲ್ಲಿ ಕೋವಿಡ್-19 ಲಗಾಮಿಲ್ಲದೆ ಏರುತ್ತಿದ್ದಾಗ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಮಾಧ್ಯಮ ಸಭೆಯಲ್ಲಿ ಮಾತನಾಡುತ್ತಾ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಾಗಬಹುದೆಂದು ನುಡಿದಿದ್ದರು. ಆದರೆ ಆಪ್ ಸರಕಾರ ಕೈಕಟ್ಟಿ ಸುಮ್ಮನೆ ಕೂರದೇ, ಟೆಸ್ಟಿಂಗ್, ಟ್ರೇಸಿಂಗ್ ಹೆಚ್ಚು ಮಾಡಿದ್ದರ ಜೊತೆಗೆ, ಆಸ್ಪತ್ರೆ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿ, ಹೊಸ ಫೀಲ್ಡ್ ಆಸ್ಪತ್ರೆ ಸ್ಥಾಪಿಸಿ, ಸೋಂಕಿತರಿಗೆ ಮನೆಯಲ್ಲೇ ಪ್ರತ್ಯೇಕತೆ-ಉಪಚಾರ ಮತ್ತು ಸಂಪರ್ಕಕ್ಕೆ ಬಂದವರಿಗೆ ಮನೆಯಲ್ಲೇ ದಿಗ್ಬಂಧನ ವಿಧಿಸಿ ಸಾರ್ವಜನಿಕ ಆರೋಗ್ಯ ಸೇವೆ ಕುಸಿಯದಂತೆ ಮಾಡಿದರು. ಎಲ್ಲದಕ್ಕಿಂತ ಹೆಚ್ಚಾಗಿ, ಎರಡು ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕರೆಗೆ ಓಗೊಟ್ಟು ನೂರಾರು ಗುಣಹೊಂದಿದ ರೋಗಿಗಳು ಮುಂದೆ ಬಂದು ತಮ್ಮ ಪ್ಲಾಸ್ಮಾ ದಾನ ಮಾಡಿ ಐಸಿಯುನಲ್ಲಿ ನರಳಾಡುತ್ತಿದ್ದ ಸಾವಿರಾರು ರೋಗಿಗಳು ಶೀಘ್ರವಾಗಿ ಚೇತರಿಕೊಳ್ಳಲು ಸಹಕಾರಿಯಾದರು. ದೆಹಲಿಯ ಅಂಕಿ-ಅಂಶಗಳು ಇದನ್ನು ದೃಢೀಕರಿಸುತ್ತವೆ. ಇತರ ತೊಂದರೆಗಳಿಂದ ಬಳಲುತ್ತಿರುವ ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಈಗ ಅಂತರ್ರಾಷ್ಟ್ರೀಯ ಸ್ತರದಲ್ಲಿ ಮನ್ನಣೆ ಪಡೆದಿರುವ ಉಪಚಾರವಾಗಿದೆ.

ದಾನಿಗಳನ್ನು ಪ್ರೋತ್ಸಾಹಿಸಲು ಅವರಿಗೆ ನಗದು ಬಹುಮಾನದ ಜೊತೆಗೆ ದಾನಿಗಳ ಹತ್ತಿರದ ಸಂಬಂಧಿಕರು ಏನಾದರು ಸೋಂಕಿತರಾದಲ್ಲಿ ಅವರಿಗೆ ಆದ್ಯತೆ ಮೇಲೆ ಚಿಕಿತ್ಸೆ ಎಂದು ಘೋಷಿಸುವುದರಿಂದ ಇನ್ನಷ್ಟು ದಾನಿಗಳು ಮುಂದೆ ಬರಬಹುದೆಂದು ಶ್ರೀಮತಿ ಮಾಲವಿಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಜಿಲ್ಲಾಡಳಿತವೇ ಜನರಿಗೆ ಮನೆಯಲ್ಲಿರಿ ಎಂದು ಹೇಳುತ್ತಿರುವಾಗ ಪ್ಲಾಸ್ಮಾ ದಾನಿಗಳು ಮಂಡ್ಯಾ ಜಿಲ್ಲೆಗೆ ಏಕೆ ಹೋಗುತ್ತಾರೆ. ಇಷ್ಟು ಸರಳ ಪ್ರಕ್ರಿಯೆಯಿಂದ ಗಂಭೀರ ರೋಗಿಗಳ ಜೀವ ಉಳಿಸಬಹುದಾಗಿದ್ದಲ್ಲಿ ಜಿಲ್ಲಾಡಳಿತ ಪ್ಲಾಸ್ಮಾ ಬ್ಯಾಂಕಿಗೆ ಏಕೆ ಹಿಂಹರಿಯುತ್ತಿದೆ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ.

Why no plasma Bank in Mysuru asks AAP

Simple procedure, similar to blood donation. One plasma donor can save two lives.

Mrs. Malavika Gubbivani, AAP Mysuru District President has urged the Dy. Commissioner of Mysuru to setup plasma bank and popularise it. Even now the government communication to public is only about using masks & physical distancing & nothing more. Mysuru death toll has crossed 500 and total cases have crossed 20,000 taking the CFR to 2.5%, much above national average.

Success of plasma therapy/treatment in Delhi – hundreds of donors, thousands of lives saved. In the month of June when the Covid19 pandemic was appearing to go out of control, Delhi’s Dy. CM, Mr. Manish Sisodia had announced in a press meet that by mid-August Delhi could have over 5 lakh cases. Shocking as it was, the Delhi AAP Government took immediate action by increasing testing, tracing, increased hospital beds, built a field hospital with 10,100 beds, allowed home isolation for asymptomatic Covid19 positive patients and home quarantine for primary and secondary contacts. But above all, they immediately established two Plasma Banks, where recently cured patients could donate their plasma full of antibodies to treat serious patients. Hundreds of volunteers came forward heeding to call by CM Arvind Kejriwal and many serious patients in ICU were treated successfully. Plasma therapy is now accepted worldwide as a reliable treatment for serious patients with co morbidities. Delhi figures speak for themselves.

Ms Malavika has also suggested that in addition to the monetary incentive, the donors should be given priority for one plasma treatment when they or their dear ones require plasma treatment. This might encourage more people to come forward & donate, she said.

When administration itself is advising people to minimise their movements & stay at home, who would want to go all the way to Mandya for plasma donation? With such simple setup if many precious lives can be saved, it is a mystery as to what is holding back the district administration.


Share