ಮೈಸೂರಿನಲ್ಲಿ ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಣೆ

ನರಸಿಂಹರಾಜ ವಿಭಾಗ

ಮೈಸೂರು ವಿದ್ಯುತ್ ನೌಕರರ ಸಂಘ. ‌ವತಿಯಿಂದ ಕಾರ್ಯದರ್ಶಿ ಶ್ರೀ ಸೋಮಣ್ಣ ರವರ‌ ನೇತೃತ್ವದಲ್ಲಿ
ವಿದ್ಯುತ್ ಕಾಯ್ದೆ 2003 ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಖಾಸಗಿ ರವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆ. ವಿದ್ಯುತ್ ಪೂರೈಕೆಯನ್ನು ಖಾಸಗಿ ಫ್ರಾಂಚೈಸಿಗಳಿಗೆ ನೀಡಲಿದ್ದು. ರಾಜ್ಯ ಸರ್ಕಾರ ಯಾವುದೇ ಚರ್ಚೆ ನಡೆಸದೆ ಕಾಯ್ದೆ ತಿದ್ದುಪಡಿ ಜಾರಿಗೆ ಮುಂದಾಗಿದೆ ಎನ್ನಲಾಗಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಖಂಡಿಸಿ ನಗರದ ವಿದ್ಯುತ್ ಪ್ರಸಾರಣ ನಿಗಮಗಳ ಬಳಿ ಕಪ್ಪುಪಟ್ಟಿ ಧರಿಸಿ ಎಂದಿನಂತೆ‌ ಕೆಲಸ ನಿರ್ವಹಿಸಿದರು.