ಮೈಸೂರು ನಗರದಲ್ಲಿ ಇಂದು ಸಂಜೆ ವೇಳೆಗೆ 10ಕ್ಕೂ ಹೆಚ್ಚು ಪಾಸಿಟಿವ್ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಗರದ ಹೃದಯಭಾಗದಲ್ಲಿರುವ ವೀಣೆ ಶೇಷಣ್ಣ ರಸ್ತೆಯಲ್ಲಿ ಮಹಿಳೆಗೆ ಕೊರೊನಾ ಸೋಂಕು ದೄಢ ಪಟ್ಟಿದ್ದು ರಸ್ತೆಯನ್ನು seal down ಮಾಡಲಾಗಿದೆ.
ದಿನೇದಿನೇ ಕೊರೊನಾ ಸೋಂಕಿನಿಂದ ಮೈಸೂರು ನಗರದಲ್ಲಿ ಜನತೆಯು ಹೆಚ್ಚು ಆತಂಕದಲ್ಲಿದ್ದಾರೆ. ಮೈಸೂರು ನಗರದಲ್ಲಿ ಸಾರ್ವಜನಿಕರು ಮುಖ( mask,)ಗವಚ ಹಾಕಿಕೊಳ್ಳದೆ ಓಡಾಟ ನಡೆಸುತ್ತಿದ್ದಾರೆ, ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ಕುಳಿತು ಹೋಗುತ್ತಿದ್ದಾರೆ, ಕಾರಿನಲ್ಲಿ ಮಿತಿಮೀರಿ ಕುಟುಂಬದವರು ಕುಳಿತು ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಈ ರೀತಿ ನಿರ್ಲಕ್ಷ್ಯ ಮಾಡಿದರೆ ಮೈಸೂರಿನಲ್ಲಿ ಅತಿವೇಗವಾಗಿ ಕೊರೊನಾ ಸೋಂಕು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಜಿಲ್ಲಾ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಸಾರ್ವಜನಿಕರು ತೊಂದರೆಗೀಡಾಗುವುದನ್ನು ಎದುರಿಸಬೇಕಾಗುತ್ತದೆ.(ಸಂಪಾದಕೀಯ)