ಮೈಸೂರಿನಲ್ಲಿ ಕರೋನಾ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ!, ನಗರದಲ್ಲಿ ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ!

Share

ಮೈಸೂರು ನಗರದಲ್ಲಿ 1000ಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ಈಗಾಗಲೇ ಬಂದಿದೆ ಎಂದು ಮೈಸೂರು ಆರೋಗ್ಯ ಅಧಿಕಾರಿ ತಿಳಿಸಿದರು ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಮೈಸೂರು ನಗರದಲ್ಲಿ A-simplamatic ಕೇಸ್ ಹೆಚ್ಚಾಗಿದೆ ಎಂದರು. SARI ಹಾಗೂ ILI ಕೇಸ್ಗಳು ಕಡಿಮೆಯಾಗಿದೆ ಎಂದು ತಿಳಿಸಿದರು.
ಮಾಸ್ಕ್ ಉಪಯೋಗಿಸಿ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಾಗಿ ಓಡಾಡಬೇಡಿ ಅಥವಾ ಗುಂಪು ಸೇರಬೇಡಿ ಎಂದರು.
ಕೆಮ್ಮು, ಜ್ವರ, ನೆಗಡಿ ಇದ್ದರೆ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಿ. ಮುಚ್ಚಿಟ್ಟರೆ ಸಮಾಜಕ್ಕು ಹಾಗೂ ಕುಟುಂಬಕ್ಕು ತೊಂದರೆಯಾಗುತ್ತದೆ ಎಂದು ಅವರು ಹೇಳಿದರು. ಸಾರ್ವಜನಿಕರು ಕೆಮ್ಮು, ಜ್ವರ, ನೆಗಡಿ ಇರುವವರು ಪರೀಕ್ಷಿಸಿಕೊಳ್ಳಬೇಕು ಇಲ್ಲದಿದ್ದರೆ ಸೋಂಕು ಸಮುದಾಯಕ್ಕೆ ಹರಡುವುದಕ್ಕೆ ದಾರಿಯಾಗಲಿದೆ ಎಂದರು.


Share