ಮೈಸೂರಿನಲ್ಲಿ ಕಳ್ಳರ ಕೈಚಳಕ

Share

ಮೈಸೂರಿನಲ್ಲಿ ಒಂದು ಕಡೆ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಕಳ್ಳರು ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಮೈಸೂರು ಹೃದಯಭಾಗಲ್ಲಿರುವ ಅರಸು ರಸ್ತೆಯಲ್ಲಿನ ಕೆಲವು ಮಳಿಗೆಗಳಲ್ಲಿ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ.
ನಿನ್ನೆ ರಾತ್ರಿ ಮಳಿಗೆಯ ಮಾಲಕರು ಹತ್ತರ ನಂತರ ಮಳಿಗೆಗೆ ಬೀಗ ಹಾಕಿ ತೆರಳಿದ್ದು ಇಂದು ಬೆಳಿಗ್ಗೆ ಬಂದು ಅಂಗಡಿ ಬಾಗಿಲು ತೆರೆಯುವ ವೇಳೆ ಬಾಗಿಲು ಮೀಟಿರುವುದು ಗಮನಕ್ಕೆ ಬಂದಿದೆ. ಒಳಗೆ ಹೋಗಿ ನೋಡಲಾಗಿ ಮಳಿಗೆಯೆಲ್ಲಿ ಕೆಲವು ವಸ್ತುಗಳೆಲ್ಲ ಇದ್ದ ಜಾಗದಲ್ಲಿ ಇಲ್ಲದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಅರಸು ರಸ್ತೆಯಲ್ಲಿರುವ ಪೆಬೆ ಜೀನ್ಸ್, ಲಿವೀಸ್, ಯು.ಎಸ್.ಪೋಲೋ, ಜಮಾಲಿ ಹಾರ್ಡ್ ವೇರ್ಸ್ ಮಳಿಗೆಗಳ ಬಾಗಿಒಲು ಮೀಟಿ ಒಳನುಗ್ಗಿದ ಕಳ್ಳರು ಕಳ್ತನ ನಡೆಸಿದ್ದಾರೆ. ಬಟ್ಟೆ ಮಳಿಗೆಯಲ್ಲಿ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ದೇವರಾಜ ಠಾಣೆಯ ಇನ್ಸಪೆಕ್ಟರ್ ಪ್ರಸನ್ನ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆ. ಕಳ್ಳತನವಾಗಿರುವ ಸ್ವತ್ತುಗಳ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ.
ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಭಾಗದಲ್ಲಿರುವ ಮಳಿಗೆಗಳಲ್ಲಿಯೇ ಕಳ್ಳತನ ನಡೆಯುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಸದಾ ವಾಹನಗಳು ಓಡಾಡುವ ಸ್ಥಳಗಳಲ್ಲಿಯೇ ಈ ರೀತಿ ಆದರೆ ಇನ್ನು ಜನಸಂಚಾರವಿಲ್ಲದ ಪ್ರದೇಶಗಳ ಕಥೆ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


Share