ಮೈಸೂರಿನಲ್ಲಿ ಕೊರೋನಾ ಸ್ಫೋಟ: ಇಂದು 21 ಪಾಸಿಟಿವ್ ಪ್ರಕರಣಗಳು ಧೃಡ

1277
Share

ಮೈಸೂರು ನಗರದಲ್ಲಿ ಇಂದು 21 ಕೊರನಾ ಸೋಂಕುಗಳು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಶ್ರೀರಾಂಪುರದ 2 ಸ್ಥಳಗಳಲ್ಲಿ ಸಿಲ್ಡೌನ್ ಮಾಡಲಾಗಿದೆ.
ಮೈಸೂರು ನಗರದಲ್ಲಿ ಕೋವಿಡ್-19 ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು ಸಾರ್ವಜನಿಕರು ವ್ಯಾಪಾರ ಸ್ಥಳಗಳು, ತರಕಾರಿ ಮಾರುಕಟ್ಟೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುತ್ತಿರುವುದು ಕಂಡು ಬಂದಿರುತ್ತದೆ. ಇದರಿಂದ ಕೊರೋನಾ ಸೋಂಕು ಹೆಚ್ಚು ಹರಡುವ ಸಾಧ್ಯತೆಗಳು ಕಂಡು ಬಂದಿವೆ. ಆದ್ದರಿಂದ ಇನ್ನು ಮುಂದೆ ಠಾಣಾಧಿಕಾರಿಗಳು ತಮ್ಮ ಠಾಣಾ ಸರಹದ್ದಿನಲ್ಲಿರುವ ವ್ಯಾಪಾರ ಸ್ಥಳಗಳು ಮತ್ತು ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮತ್ತು ಅಂಗಡಿಯ ಮಾಲೀಕರುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಡಿಸಿಪಿ ಡಾ,ಎ.ಎನ್ ಪ್ರಕಾಶ್ ಗೌಡ ಸೂಚಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ಸೂಕ್ತ ಮಾರ್ಗದರ್ಶನ ನೀಡಿ, ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ. ನಿಮ್ಮ ಠಾಣಾ ಸರಹದ್ದಿನಲ್ಲಿರುವ ಅಂಗಡಿ ಮಾಲ್ ಮತ್ತು ಹೋಟೆಲ್ ಗಳ ಮಾಲೀಕರುಗಳಿಗೂ ಸಹ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿ ಮಾಸ್ಕ್ ಧರಿಸಿದವರಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವಂತೆ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಸೂಕ್ತ ಮಾರ್ಗದರ್ಶನ ನೀಡಿ, ಉಲ್ಲಂಘಿಸುವವರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಿ ಎಂದಿದ್ದಾರೆ.

ಪಿಐ ರವರುಗಳು ನಿಮ್ಮ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದ ಸಾರ್ವಜನಿಕರು ಹೆಚ್ಚು ಗುಂಪು ಸೇರುವ ಸ್ಥಳಗಳು ಮತ್ತು ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶ ಪಾಲಿಸಲಾಗುತ್ತದೆಯೇ ಎಂದು ಪರಿಶೀಲಿಸಿ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಕೊರೋನಾ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಿ. ಕೈಗೊಂಡ ಕ್ರಮದ ಬಗ್ಗೆ ಪಾಲನಾ ವರದಿ ಸಲ್ಲಿಸಿ ಎಂದಿದ್ದಾರೆ.

ಕೊರೊನಾ ರಾಜ್ಯ ಅಲರ್ಟ್

23/06/2020

ಮೈಸೂರು 21
ಬೆಂಗಳೂರು 107
ಬಳ್ಳಾರಿ 53
ಬೀದರ್ 22
ವಿಜಯಪುರ 16
ಯಾದಗಿರಿ 13
ಉಡುಪಿ 11
ಗದಗ 09
ದಕ್ಷಿಣಕನ್ನಡ 08
ಕೋಲಾರ 08
ಹಾಸನ 07
ಕಲಬುರಗಿ 06
ಚಿಕ್ಕಬಳ್ಳಾಪುರ 05
ಶಿವಮೊಗ್ಗ 05
ಧಾರವಾಡ 04
ತುಮಕೂರು 04
ಕೊಪ್ಪಳ 04
ಚಾಮರಾಜನಗರ 04
ರಾಯಚೂರು 03
ಉತ್ತರಕನ್ನಡ 03
ಮಂಡ್ಯ 02
ಬೆಳಗಾವಿ 02
ದಾವಣಗೆರೆ 02
ಹಾವೇರಿ 02
ಕೊಡಗು 01

ರಾಜ್ಯದಲ್ಲಿ ಇಂದು ಹೊಸದಾಗಿ 322 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9721 ಕ್ಕೆ ಏರಿಕೆ ಯಾಗಿದೆ.

ಇಂದು 274 ಗುಣಮುಖರಾಗಿದ್ದಾರೆ
6004 ಎಂದು ಹೇಳಲಾಗಿದೆ.

ಸಕ್ರಿಯ ಪ್ರಕರಣಗಳು 3563… ದಾಖಲಾಗಿದೆ.

ಇಲ್ಲಿಯವರೆಗೆ ಒಟ್ಟು ಸಾವು 150 ಸಂಭವಿಸಿದೆ.


Share