ಮೈಸೂರಿನಲ್ಲಿ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯಲು ಹರಸಾಹಸ

Share

ಮೈಸೂರು ಇಎಸ್ ಐ ಆಸ್ಪತ್ರೆಯಲ್ಲಿ ಕೂಡ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ, ಸರಿಯಾಗಿ ಮೆಡಿಸಿನ್ ಕೂಡ ಕೊಡುತ್ತಿಲ್ಲ, ವೈದ್ಯರು ಸರಿಯಾಗಿ ವಿಚಾರಿಸಿಕೊಳ್ಳುತ್ತಿಲ್ಲವೆಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಮಹಿಳೆಯೋರ್ವರು ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿಯೋರ್ವರ ಜೊತೆ ಮಾತನಾಡಿರುವುದು ಕಂಡು ಬಂದಿದ್ದು, ನನ್ನ ಮಗಳು ಕೂಡ ಡಾಕ್ಟರ್ ಇದ್ದಾಳೆ. ಈ ಆಸ್ಪತ್ರೆಯಲ್ಲಿ ಐಸೋಲೇಶನ್ ಕೊಡ್ತೀವಿ ಅಂದ್ರು ಬಂದ್ವಿ, ಪಾಸಿಟಿವ್ ಬಂದಿದೆ ಅಂದರು, ಬಿಪಿ ಶುಗರ್ ಏನು ಚೆಕ್ ಮಾಡಿಸಿದರೂ ರಿಪೋರ್ಟ್ ಕೊಡ್ತಾರೆ. ನಮಗೆ ಪಾಸಿಟಿವ್ ಬಂದಿದೆ ಅನ್ನೋದಕ್ಕೆ ಏನು ರಿಪೋರ್ಟ್ ಕೊಡ್ತಿಲ್ಲ, ಮೊದಲು ರಿಪೋರ್ಟ್ ತರಿಸಿಕೊಡ್ಸಿ, ಕೇಳಿದರೆ ಮಿಶನ್ ಅಪ್ ಡೇಟ್ ಆಗ್ತಿಲ್ಲ. ಕೆಟ್ಟೋಗಿದೆ ಎನ್ನುತ್ತಿದ್ದೀರಿ, ರಾತ್ರಿ ಬಂದು ಅಡ್ಮಿಶನ್ ಆಗಿದ್ದೇವೆ. ಇಪ್ಪತ್ತು ಜನ ಮಹಿಳೆಯರಿಗೆ ಎರಡು ಬಾತ್ ರೂಂ ಕೊಟ್ಟಿದ್ದಾರೆ, ಏನು ಕ್ಲೀನಿಂಗ್ ಇಲ್ಲ, ನೀರು ಕೂಡ ಇಲ್ಲ ಎಂದಿದ್ದಾರೆ. ಅಲ್ಲಿದ್ದ ಇತರ ರೋಗಿಗಳು ಕೂಡ ಸ್ಯಾನಿಟೈಸರ್ ಕೊಡುತ್ತಿಲ್ಲ, ಮಾಸ್ಕ್ ಕೊಡ್ತಿಲ್ಲ, ನಾವು ನಮಗೆ ಹೇಳುತ್ತಿದ್ದೇವೆ. ನೀವು ನಿಮಗಿಂತ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಪೇಶಂಟ್ ಹೀಗೆ ಹೇಳ್ತಿದ್ದಾರೆ ಅಂತ ಕೇಳಿ, ನಮಗೆ ಸದ್ಯಕ್ಕೆ ಮನೆಗೆ ಕಳಿಸಿಕೊಡಿ. ಮನೆಯಲ್ಲೇ ಐಸೋಲೇಶನ್ ಮಾಡ್ಕೋತೇವೆ ಎಂದಿದ್ದಾರೆ. ಅದಕ್ಕೆ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯಿಸಿ ಕ್ರಿಟಿಕಲ್ ಪೇಶಂಟ್ ನ ಟ್ರೀಟ್ ಮಾಡ್ತಿದ್ದೇವೆ ಎಂದಿದ್ದು, ಅದಕ್ಕೆ ಪೇಶಂಟ್ ನೀವು ಕ್ರಿಟಿಕಲ್ ಪೇಶಂಟ್ ಗೆ ಟ್ರೀಟ್ ಮಾಡಿ, ಅಟ್ ಲೀಸ್ಟ್ ನಮಗೆ ಪುಶ್ ಅಪ್ ಬೇಕು, ನಿನಗೆ ಏನಾಗಿದೆಯಪ್ಪ, ಗಂಟಲು ನೋವಿದ್ಯಾ? ಚೆನ್ನಾಗಿದಿಯಾ?, ಇನ್ನೇನಾದರೂ ಪ್ರಾಬ್ಲಂ ಇದೆಯಾ? ಅಂಥ ಕೇಳಿ, ಏನು ಕೇಳಲ್ಲ, ಮಾತ್ರೆ ಯಾವುದು ಬೇಕು ಏನೂ ಕೇಳಲ್ಲ, ಇಲ್ಲಿ ಅವ್ಯವಸ್ಥೆ ಇದೆ ಅಂತ ಗೊತ್ತಿರಲಿಲ್ಲ. ನೀವು ಚೆಕ್ ಮಾಡದೆನೇ ಕ್ರಿಟಿಕಲ್ ಪೇಶಂಟ್ ಅಂತ ಹೇಗೆ ಹೇಳ್ತಿರಾ? ನಮಗೆ ಯಾವುದು ಲಕ್ಷಣಗಳಿರಲಿಲ್ಲ, ಇಲ್ಲಿ ಬಂದ ಮೇಲೆ ನೆಗಡಿ ಸ್ಟಾರ್ಟ್ ಆಗಿದೆ ಏನು ಮಾಡೋದು ನಾವು, ಯಾವ ಮಾತ್ರೆ ಕೂಡ ಕೊಡಲ್ಲ, ಕೇಳಿದ್ರೆ ಎಸ್ಕೇಪ್ ಆಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಕಂಡು ಬಂದ ದೃಶ್ಯದಲ್ಲಿ ಸಾಮಾಜಿಕ ಅಂತರವೇ ಕಂಡು ಬರುತ್ತಿಲ್ಲ. ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೆ ಒಳ್ಳೆಯದು.


Share