ಮೈಸೂರಿನಲ್ಲಿ ಮತ್ತೆ ಇಬ್ಬರನ್ನು ಬಲಿ ತೆಗೆದುಕೊಂಡ ಕರೋನ ?ಇಂದು ಸಂಜಯೊಳಗೆ 25ಕ್ಕೂ ಹೆಚ್ಚು ಕೇಸ್ ದೃಢಪಡುವ ಸಾಧ್ಯತೆ?!

ಮೈಸೂರು
ಮೈಸೂರಿನಲ್ಲಿ ಇಂದು ಇಬ್ಬರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಸಂಜೆವೇಳೆಗೆ ದೃಢಪಡಲಿದೆ ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕು ಇಂದು 25ಕ್ಕೂ ಹೆಚ್ಚು ಮಂದಿಗೆ ಹರಡಿದ್ದು ಸಂಜೆ ವೇಳೆಗೆ ದೃಢಪಡಲಿದೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಓರ್ವ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಂದ ಸೋಂಕು ಹರಡಿರುವುದಾಗಿ ತಿಳಿದುಬಂದಿದೆ. ಕೊರೋನ ಸೋಂಕು ನಿಯಂತ್ರಿಸಲು ಮೈಸೂರು ನಗರ ಪಾಲಿಕೆ ಕುಕ್ಕರಹಳ್ಳಿ ವಾಯುವಿಹಾರ, ಉದ್ಯಾನವನ, ಮೈದಾನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲು ಮೈಸೂರು ಮಹಾನಗರ ಪಾಲಿಕೆ ಆದೇಶ ಮಾಡಿದೆ . ಇಂದು ಮತ್ತು ನಾಳೆ ನ್ಯಾಯಾಲಯ ಕಲಾಪ ಇರುವುದಿಲ್ಲ ಎಂದು ಹೇಳಲಾಗಿದ್ದು ಎರಡು ನ್ಯಾಯಾಲಯಗಳನ್ನು ಸೀಲ್ ಡೌನ್ ಮಾಡಲಾಗಿದೆ . ಎರಡು ದಿನ ಕಕ್ಷಿದಾರರು ವಕೀಲರ ಬಳಿ ಅಥವಾ ನ್ಯಾಯಾಲಯದ ಬಳಿ ಬರಬಾರದು ಎಂದು ವಕೀಲ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.