ಮೈಸೂರಿನ ಅವಧೂತ ದತ್ತಪೀಠದಲ್ಲಿ ಚೌತಿ ಪ್ರಯುಕ್ತ ಸಹಸ್ರ ಮೋದಕ ಹೋಮ

ಓಂ ಶ್ರೀ ಮಹಾಗಣಪತಯೇ ನಮಃ
ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ಬರುವ ಚೌತಿಯನ್ನು ಪ್ರಧಾನ ಸಂಕಷ್ಟಹರ ಚತುರ್ಥಿ ಎಂದು ಶಾಸ್ತ್ರವೇತ್ತರು ಹೇಳುತ್ತಾರೆ. ಅದೂ ಭಾನುವಾರವೇ ಬಂದಿರುವುದು ಮತ್ತಷ್ಟು ವಿಶೇಷ.
ಆದ್ದರಿಂದ ಪರಮಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯಾಶೀರ್ವಾದಗಳೊಂದಿಗೆ ದತ್ತಪೀಠದ ವಿಶ್ವಪ್ರಾರ್ಥನಾ ಮಂದಿರದಲ್ಲಿ ನಾಳೆ ಅಂದರೆ ದಿನಾಂಕ 3-9-2023ರಂದು ಸಂಜೆ 4 ಗಂಟೆಯಿಂದ ಸಹಸ್ರಮೋದಕ ಹೋಮವು ಪ್ರಾರಂಭವಾಗಲಿದೆ. ನಂತರ ಸಂಜೆ 6.30ಕ್ಕೆ ಸಂಕಷ್ಟಹರ ಗಣಪತಿ ವ್ರತವು ನಡೆಯಲಿದೆ. ವ್ರತದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ತಾವೇ ಸ್ವತಃ ಪೂಜಾ ಸಾಮಗ್ರಿಗಳೊಂದಿಗೆ ಪೂಜೆಯನ್ನು ಮಾಡಬಹುದಾಗಿದೆ.
ನಿಮ್ಮ ಸಕಲ ವಿಘ್ನಗಳನ್ನೂ ದೂರಮಾಡುವ ಈ ಗಣಪತಿ ವ್ರತದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಇಂತಹ ಅತ್ಯುತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿ.