ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಶನೈಶ್ಚರ ಯಾಗ

ಶನೈಶ್ಚರ ಯಾಗ
ಜಯ ಗುರು ದತ್ತ – ಪರಮಪೂಜ್ಯ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದಗಳೊಂದಿಗೆ, ಶ್ರಾವಣ ಬಹುಳ ಏಕಾದಶಿ ಅಂದರೆ ಸೆಪ್ಟೆಂಬರ್ 9ನೇ ತಾರೀಖು ಕೊನೆಯ ಶ್ರಾವಣ ಶನಿವಾರದ ಪ್ರಯುಕ್ತ ಅವಧೂತ ದತ್ತಪೀಠದ ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಶನೈಶ್ಚರ ಯಾಗ ಮತ್ತು ಸುದರ್ಶನ ಹೋಮಗಳು ನಡೆಯಲಿವೆ. ಶ್ರೀ ಮಹಾವಿಷ್ಣುವಿಗೆ ಪ್ರಿಯವಾದ ಶ್ರಾವಣಮಾಸವೂ, ರುದ್ರದೇವರಿಗೆ ಸಂಬಂಧಿಸಿದ ಆರ್ದ್ರಾ ನಕ್ಷತ್ರವೂ ಕೂಡಿ ಬಂದಿರುವ ಸುಸಂದರ್ಭದ ಕಾರಣ ಈ ವಿಶೇಷ ಹವನಗಳು ನಡೆಯಲಿವೆ. ಈ ಯಾಗದಲ್ಲಿ ಶನೈಶ್ಚರ ವ್ರತ, ಶನಿ ತೈಲಾಭಿಷೇಕಗಳೂ ನಡೆಯಲಿದ್ದು, ಭಕ್ತರು ತಾವೇ ಸ್ವಯಂ ಮಾಡಬಹುದಾಗಿದೆ. ಭಕ್ತಾದಿಗಳು ಈ ಸದವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಿ.
ಪೂಜೆಯ ಸಮಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ
ವಿವರಗಳಿಗೆ ಸಂಪರ್ಕಿಸಿ 0821 – 2486486