ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಆಶ್ರಮದ ವತಿಯಿಂದ ನಿರಂತರವಾಗಿ ಆಹಾರ ಕಿಟ್ ವಿತರಣೆ

685
Share

ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ. 46ನೇ ದಿನದ ಕೋವಿಡ್ ಸೇವಾ ಕಾರ್ಯ – ಎಂ ಕೆ ಸೋಮಶೇಖರ್
ಕೋವಿಡ್ 19 ಹಿನ್ನೆಲೆ ಲಾಕ್ ಡೌನ್ ಆದ ಪ್ರಾರಂಭದ ದಿನದಿಂದಲೂ ಊಟ,ನೀರು,ಮಾಸ್ಕ್,ಸ್ಯಾನಿಟೈಜರ್ ,ಆಹಾರ ಪದಾರ್ಥಗಳ ಕಿಟ್ ಗಳನ್ನು ಸತತವಾಗಿ ಮೈಸೂರು ನಗರದ ವಿವಿಧ ಭಾಗಗಳಲ್ಲಿನ ಕಡುಬಡವರು,ನಿರಾಶ್ರಿತರು,ಮನೆಗೆಲಸ ಮಾಡುವವರು,ವಿವಿಧ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನು ವಿತರಿಸುತ್ತಿದ್ದು 46ನೇ ದಿನವಾದ ಇಂದು ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳವರ ಆಶೀರ್ವಾದ ಮತ್ತು ಸಹಕಾರದೊಂದಿಗೆ ಆಶ್ರಮದ ಆವರಣದಲ್ಲಿ ದತ್ತನಗರ,ಗೌರಿಶಂಕರ ನಗರ,ಗುಂಡುರಾವ್ ನಗರ,ರಾಮಯ್ಯ ಬ್ಲಾಕ್ ನ ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ,ಆಶ್ರಮದ ಹಿರಿಯರು, ಮುಖ್ಯಸ್ಥರೂ ಆದ ಪ್ರಸಾದ್ ರವರು,ಕಾಂಗ್ರೆಸ್ ಮುಖಂಡರುಗಳಾದ ಶೇಖರ್,ಹರವೆ ಟೈಲರ್ ಸಿದ್ದು,ಚಾಮುಂಡೇಶ್ವರಿ ಫ್ಲೆವುಡ್ಸ್ ಮಾಲೀಕರಾದ ಚಿನ್ನಂಬಳ್ಳಿ ಮಹದೇವು,ಗುಣಶೇಖರ್ ,ವಿಶ್ವ,ಲೀಲಾ ಪಂಪಾಪತಿ ಮತ್ತಿತರರು ಉಪಸ್ಥಿತರಿದ್ದರು.


Share