ಮೈಸೂರು: ಅತ್ಯುತ್ತಮ ಶಿಕ್ಷಕರು ಪ್ರಶಸ್ತಿ ಬಿರುದು ಪ್ರಧಾನ

Share

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ವಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗಿರುತಿಸಿ 2019-2020 ಸಾಲಿನ ಅತ್ಯುತ್ತಮ ಶಿಕ್ಷಕರು ಎಂಬ ಪ್ರಶಸ್ತಿ ಬಿರುದು ನೀಡಿ ಗೌರವಿಸಲಾಯಿತು
ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷರಾದ ಶ್ರೀಮತಿ ಡಾ !! ಸುಮಂಗಳ .ಆರ್.
(ಬಿ.ಎ.ಬಿ.ಇ. ಡಿ) ಉದಯಗಿರಿ ಜೆ.ಎಸ್.ಎಸ್.ಶಾಲೆ ಹಿಂದಿ ಶಿಕ್ಷಕರು.

ಆರ್.ಎಂ.ನವೀನ್ ಕುಮಾರ್ ಕೆಮಿಸ್ಟ್ರಿ ವಿಜಯ ವಿಠಲ ಪದವಿ ಪೂರ್ವ ಕಾಲೇಜು ಸರಸ್ವತಿ ಪುರಂ ಮೈಸೂರು.

ಮುತಣ್ಣ ನಿಂಗಪ್ಪ ಬಿಡನಾಳ
ಮುಖ್ಯ ಶಿಕ್ಷಕರು
ಹೆಚ್.ಹೆಚ್.ಎಂ.ಓ.ಐ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಕೆ.ಜಿ.ಮಾದಪ್ಪ
ಹ್ಯಾಂಡ್ ಬಾಲ್ ಸಂಸ್ಥೆ ಶಿಕ್ಷಕರು
ರಾಜ್ಯ ಉಪಾಧ್ಯಕ್ಷರು

ಅಪ್ಪಾಜಿ ಗೌಡ ಎಂ.ಎಸ್
ಶ್ರೀ ಕಂಠ ಶಾಲೆ ಕೆ.ಎನ್.ಪುರ

ರಂಗಸ್ವಾಮಿ ಎಂ.ಜಿ
ಶ್ರೀ ಕಂಠ ಶಾಲೆ ಕೆ.ಎನ್.ಪುರ

ಸಿ.ಎನ್.ರವೀಂದ್ರ ಕುಮಾರ್
ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಸೂರು.

ಜ್ಯೋತಿಬಾ ಫುಲೆ ದಂಪತಿ ಸ್ಮರಿಸಿ

ರಾಷ್ಟ್ರ ನಿರ್ಮಾಣ ಕೈಂಕರ್ಯದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಬಿಜೆಪಿಯ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್ ಬಿಜೆಪಿ ಎನ್ಆರ್ ಯುವ ಮೋರ್ಚಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಸನ್ಮಾನ ಸಲ್ಲಿಸಿ ಮಾತನಾಡಿದರು.

ಅಕ್ಷರ ವಂಚಿತ ಸಮುದಾಯಗಳಿಗೆ ಅಕ್ಷರದ ಬೆಳಕು ನೀಡಿದ ಜ್ಯೋತಿಬಾ ಫುಲೆ ದಂಪತಿ ಹಾಗೂ ಶಿಕ್ಷಕರಾಗಿ ದುಡಿದು ರಾಷ್ಟ್ರಪತಿ ಹುದ್ದೇಗೇರಿದ ಡಾ.ಎಸ್‌.ರಾಧಾ ಕೃಷ್ಣನ್‌ ಅವರ ಆದರ್ಶ ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ.
ಮುಂದಿನ ದಿನಗಳಲ್ಲಿ ಮೈಸೂರಿನ ಸುತ್ತಮುತ್ತ ನಲ್ಲಿರುವ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಖಾಸಗಿ ಶಾಲೆಯನ್ನು
ಮೀರಿಸುವಂತೆ ದತ್ತು ಪಡೆದಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಎಲ್‌ಕೆಜಿ, ಯುಕೆಜಿಯಿಂದಲೇ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಎಂದರು.
ಬಿಜೆಪಿ ನರಸಿಂಹರಾಜ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಲೋಹಿತ್ ಮಾತನಾಡಿ
ವ್ಯಕ್ತಿ
ಯನ್ನು ದೊಡ್ಡವರನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್,ಎನ್.ಆರ್.ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗೌಡ ,ರಾಜ್ಯ ಅಲ್ಪಸಂಖ್ಯಾತ ಪ್ರಧಾನಕಾರದರ್ಶಿಗಳಾದ ಡಾ ಅನಿಲ್ ಥಾಮಸ್ ಹಾಗೂ ಮೈಸೂರು ನಗರ ಯುವಮೋರ್ಚಾ ಪ್ರಧಾನ ಕಾರದರ್ಶಿಗಳಾದ ಭರತ್ ಹಾಗೂ ಎನ್.ಆರ್.ಕ್ಷೇತ್ರದ ಯುವಮೋರ್ಚಾ ಪ್ರಧಾನ ಕಾರದರ್ಶಿಗಳಾದ ನವೀನ್ ಶೆಟ್ಟಿ,ಮೈಸೂರು ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜು, ಮೈಸೂರು ನಗರ ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್,
ಎನ್.ಆರ್.ಕ್ಷೇತ್ರದ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ನಾರಾಯಣ ಲೋಲಪ್ಪ,ಪ್ರಧನ ಕಾರ್ಯದರ್ಶಿಗಳಾದ ಬಸವರಾಜು


Share