ಮೈಸೂರು- ಅನುಷಾ ನಿತಿನ್ ಮಿಸಸ್ ಪ್ರಶಸ್ತಿ

ಮೈಸೂರು : ಪ್ರತಿಭಾ ಶಾಂಶಿಮಠ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸಸ್ ಇಂಡಿಯಾ ಕರ್ನಾಟಕ 2023-24 ಸೌಂದರ್ಯ ಸ್ಪರ್ಧೆಯಲ್ಲಿ ಮೈಸೂರಿನ ಅನುಷಾ ನಿತಿನ್ ಮಿಸಸ್ ಮೈಸೂರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ಯಲ್ಲಿರುವ ಶ್ರೀಹರಿ ಗೋಡೆ ಆಡಿಟೋರಿಯಂ ನಲ್ಲಿ ನಡೆದ ಮಿಸಸ್ ಇಂಡಿಯಾ ಕರ್ನಾಟಕ ಅಂತಿಮ ಸುತ್ತಿನಲ್ಲಿ ಮಿಸಸ್ ಮೈಸೂರು ಕಿರೀಟವನ್ನು ಮುಡಿಗೇರಿಸಿಕೊಂಡರು. ಮಾತ್ರವಲ್ಲದೇ ಮಿಸಸ್ ಕರ್ನಾಟಕ ಏಂಜಲ್ ಕ್ವೀನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಎನ್. ನಿತಿನ್ ಪ್ರಸಾದ್ ಪತ್ನಿ ಆಗಿರುವ ಅನುಷಾ ಅವರು ಕೆ.ಸತ್ಯನಾರಾಯಣ, ಲಕ್ಷ್ಮಿ ಚಾಂದಿನಿ ಅವರ ಪುತ್ರಿಯಾಗಿದ್ದಾರೆ.
ರಾಜ್ಯದ ನಾನಾ ಭಾಗಗಳಿಂದ 35 ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.