ಮೈಸೂರು ಅರಮನೆ: ವಾರದ ಎಲ್ಲಾ ದಿನಗಳು ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ.

Share

ಮೈಸೂರು ವಾರದ ಎಲ್ಲಾ ದಿನಗಳು ಪ್ರವಾಸಿಗರಿಗೆ ಮೈಸೂರು ಅರಮನೆಯ ವೀಕ್ಷಣೆಗಾಗಿ ತೆರೆಯುವ ಬಗ್ಗೆ , * – * – * ದಿನಾಂಕ : 08-08-2020 ರಿಂದ ಪ್ರತಿ ಶನಿವಾರ , ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಒಳಗೊಂಡಂತೆ ವಾರದ ಎಲ್ಲಾ ದಿನಗಳಂದು ಪ್ರವಾಸಿಗರಿಗೆ ಮೈಸೂರು ಅರಮನೆ ವೀಕ್ಷಣೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ ಹಾಗೂ ಅರಮನೆಯ ಆವರಣದಲ್ಲಿ ಸಂಜೆ ನಡೆಯುವ “ ಧ್ವನಿ ಮತ್ತು ಬೆಳಕು ” ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ ಹಾಗೂ ಪ್ರತಿ ಭಾನುವಾರದಂದು ನಡೆಯುವ ವಿದ್ಯುತ್ ದೀಪಾಲಂಕಾರ ” ವ್ಯವಸ್ಥೆಯನ್ನು ಸಹ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿರುತ್ತದೆ . ಸದರಿ ವಿಷಯವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಲು ಈ ಮೂಲಕ ಕೋರಲಾಗಿದೆ .


Share