ಮೈಸೂರು ಅವಧೂತ ದತ್ತಪೀಠದ ವೆಂಕಟರಮಣ ಸ್ವಾಮಿ ದೇವಸ್ಥಾನ ನಾಳೆಯಿಂದ ಆರಂಭ

Share

ಮೈಸೂರು ನಗರದ ಅವಧೂತ ದತ್ತಪೀಠ ಗಣಪತಿ ಆಶ್ರಮದ ಆವರಣದಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನ ನಾಳೆಯಿಂದ ಆರಂಭವಾಗಲಿದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಯ0ತೆ ದೇವಾಲಯದ ಕಾರ್ಯಕ್ರಮ ಇರುತ್ತದೆ ಎಂದು ಅವಧೂತ ದತ್ತಪೀಠ ಶ್ರೀ ಗಣಪತಿ ಆಶ್ರಮದ ಕಿರಿಯರಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ತಿಳಿಸಿದರು ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ದೇವಾಲಯ ಹಾಗೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು ದೇವಾಲಯದ ಹುಂಡಿ ಗೆ ಕಾಣಿಕೆ ಇತ್ಯಾದಿ ಹಾಕಬಾರದು ಅವಧೂತ ದತ್ತ ಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಭಕ್ತರಲ್ಲಿ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು ಒಂದು ವೇಳೆ ಭಕ್ತರು ದೇವರಿಗೆ ಹಣ ಹಾಕಬೇಕೆಂದು ಹರಿಸಿಕೊಂಡಿದ್ದರೆ ಅದನ್ನು ಅವರವರ ಮನೆಯಲ್ಲಿ ದೇವರ ಮುಂದೆ ತೆಗೆದಿಟ್ಟಿದ್ದು ದೇವಸ್ಥಾನ ಆರಂಭಗೊಂಡಾಗ ದೇವಾಲಯಕ್ಕೆ ತಂದು ಸಮರ್ಪಿಸಲು ಅವರು ಮಾರ್ಗೋಪಾಯವನ್ನು ಹೇಳಿದರು.

ಸೋಮವಾರ 8.6.2020ರಿಂದ ಅವಧೂತ ದತ್ತ ಪೀಠದ ದತ್ತಾತ್ರೇಯ ದೇವಾಲಯ ಹಾಗು ವೆಂಕಟೇಶ್ವರ ದೇವಾಲಯ ಈ ಕೆಳಕಂಡ ಸೂಚನೆಗೊಳಪಟ್ಟು ತೆರೆಯಲಿದೆ. ಮುಖ್ಯ ಸೂಚನೆಗಳು. ದಯವಿಟ್ಟು ಓದಿ.

ದೇವಾಲಯಗಳು ತೆರೆದಿರುವ ಸಮಯ ಬೆಳಿಗ್ಗೆ 7 ರಿಂದ 10 ರವರೆಗೆ ಸಂಜೆ 6 ರಿಂದ 7.30 ರವರೆಗೆ

ಕ್ವಾರಂಟೈನ್ ಮುದ್ರೆ ಇದ್ದವರಿಗೆ ಪ್ರವೇಶವಿಲ್ಲ
65 ವರ್ಷ ಮೇಲ್ಪಟ್ಟವರು ,10 ವರ್ಷದ ಒಳಗಿನವರಿಗೆ ಪ್ರವೇಶವಿಲ್ಲ
ಕರೋನ ಸೋಂಕು ಲಕ್ಷಣವಿದ್ದಲ್ಲಿ ಒಳಗೆ ಬರಬೇಡಿ.
ದೇವಾಲಯ/ ಆಶ್ರಮ ಸಿಬ್ಬಂದಿಯೊಡನೆ ಸಹಕರಿಸಿ
ನಿಮ್ಮ ಪಾದರಕ್ಷೆಗಳನ್ನು ನಿಮ್ಮ ವಾಹನಗಳಲ್ಲೇ ಬಿಡಿ.
ಕಡ್ಡಾಯವಾಗಿ ಮಾಸ್ಕ್ (mask) ದೇವಾಲಯದ ಆವರಣದಲ್ಲಿದ್ದಷ್ಟು ಕಾಲ ಧರಸಿರಬೇಕು.
ದೇವಾಲಯ ಪ್ರವೇಶಿಸುವ ಮೊದಲು ಕೈ ಕಾಲು ತೊಳೆದುಕೊಳ್ಳಿ
ತೀರ್ಥ, ಪ್ರಸಾದ ಕೊಡುವುದಿಲ್ಲ.
ದೇವರ ದರ್ಶನವಾದ ಕೂಡಲೇ ಹೊರಡಬೇಕು. ಕುಳಿತು ಧ್ಯಾನ ಮಾಡಲು ಅವಕಾಶವಿಲ್ಲ
ಶುಕವನ, ಬೋನ್ಸಾಯ್ ವನ, ವಿಶ್ವಂ ವಸ್ತು ಸಂಗ್ರಹಾಲಯ ತೆರೆಯುವುದಿಲ್ಲ
ಪೂಜ್ಯ ಶ್ರೀ ಸ್ವಾಮೀಜಿಯವರು ಭಾನುವಾರಗಳು ಬೆಳಿಗ್ಗೆ 9 ಘಂಟೆಗೆ ದರ್ಶನ ನೀಡುತ್ತಾರೆ.
ಭಕ್ತರು ಆಶ್ರಮದಲ್ಲಿ ರಾತ್ರಿ ತಂಗಲು ಅವಕಾಶವಿರುವುದಿಲ್ಲ


Share