ಮೈಸೂರು ಆಕಾಶವಾಣಿಯಲ್ಲಿ ಲಾಕ್ ಡೌನ್ ಸಂಬಂಧ ಕಥೆಗಳು ಪ್ರಕಟವಾಗಲಿದೆ

ಮೇ 13 ರಿಂದ ಆಕಾಶವಾಣಿಯಲ್ಲಿ ‘ಲಾಕ್‍ಡೌನ್ ಕಥೆಗಳು’ ಆರಂಭ
ಮೈಸೂರು ಮೇ.11:- ಆಕಾಶವಾಣಿ ಮೈಸೂರು ಕೇಂದ್ರದ ವತಿಯಿಂದ ಮೇ 13 ರಿಂದ “ಲಾಕ್‍ಡೌನ್ ಕಥೆಗಳು” ಎಂಬ ವಿನೂತನ ಮಾಲಿಕೆಯನ್ನು ಪ್ರಾರಂಭಿಸಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ತಾವು ಕಣ್ಣಾರೆ ಕಂಡಂಥಹ ಹಾಗೂ ಅನುಭವಿಸಿದಂಥವಾ ಘಟನೆಗಳ ಕುರಿತಾಗಿ 200 ಪದಗಳಿಗೆ ಮೀರದಂತೆ ಒಂದು ಕಥೆಯನ್ನು ಕಳುಹಿಸಬಹುದು.
ಪ್ರಸಾರಕ್ಕೆ ಯೋಗ್ಯವಾದ ಕಥೆಗಳನ್ನು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಧ್ಯಾಹ್ನ 1.20 ಘಂಟೆಗೆ ಮೈಸೂರು ಆಕಾಶವಾಣಿ ಕೇಂದ್ರದಿಂದ ಪ್ರಸ್ತುತ ಪಡಿಸಲಾಗುವುದು. ಅಲ್ಲದೆ ಈ ಕಥೆಗಳನ್ನು ಎಫ್.ಎಂ.100.6 ಮೈಸೂರು ಯೂಟೂಬ್ ಚಾನೆಲ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು.
ಕಥೆಗಳನ್ನು ಒಂದು ಬಿಳಿಯ ಹಾಳೆಯಲ್ಲಿ ಬರೆದು ಅದರ ಫೋಟೋ ಕಾಪಿಯನ್ನಾಗಲಿ ಅಥವಾ ಕನ್ನಡದಲ್ಲಿ ಟೈಪ್ ಮಾಡಿ ಇ-ಮೇಲ್ replyairmysuru@gmail.com ಇಲ್ಲಿಗೆ ಕಳುಹಿಸುವಂತೆ ಆಕಾಶವಾಣಿ ಮೈಸೂರಿನ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ