ಮೈಸೂರು ಇಂದಿನ ಹೈಲೈಟ್ಸ್

Share

…….ಮೈಸೂರು ದಿವಂಗತ ಬಾಲಸುಬ್ರಮಣ್ಯಮ್ ಅವರ ನಿಧನಕ್ಕೆ ಮೈಸೂರ್ ಪತ್ರಿಕೆಯ ತಂಡ ಸಂತಾಪ ಸೂಚಿಸುತ್ತದೆ.
……. ಚಾಮರಾಜನಗರದ ಬಳಿ ಕೆಎಸ್ಆರ್ಟಿಸಿ ಬಸ್ ಚಾಲಕನ ಆರೋಗ್ಯ ತಪ್ಪಿದ್ದು ಸಮಯಪ್ರಜ್ಞೆಯಿಂದ ಬಸ್ಸನ್ನು ಗದ್ದೆಯೊಳಗೆ ಚಾಲಕ ನುಗ್ಗಿ ಸಿರುವ ಘಟನೆ ನಡೆದಿದೆ.
……. ಬಾಕಿ ವೇತನ ಪಾವತಿ ಗಾಗಿ ಸಹಾಯಕ ಹುದ್ದೆಗಳ ಭರ್ತಿ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದವರು ಮೈಸೂರು ನಗರದ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
…….. ಎಪಿಎಂಸಿ ಕಾಯಿದೆ ತಿದ್ದುಪಡಿ ವಿರೋಧಿಸಿ ಮೈಸೂರು ಭಾಗದ ರೈತರು ಮೈಸೂರು-ಬೆಂಗಳೂರು ರಸ್ತೆ ಹೆದ್ದಾರಿಯಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧ ಎಂದು ಪ್ರತಿಭಟನೆಯಲ್ಲಿ ಮುಂದಾಗಿದ್ದರು.
…… ರೈತರು ಇಂದು ರಸ್ತೆ ತಡೆ ಚಳವಳಿ ನಡೆಸುವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ಬರದಿದ್ದರಿಂದ ಖಾಲಿ ಇದ್ದ ದೃಶ್ಯ ಕಂಡು ಬರುತ್ತಿತ್ತು.

……..ಮೈಸೂರು ನಗರದಲ್ಲಿ ಇಂದು ಮಾಸ್ಕ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಪಾಲಿಕೆ ವತಿಯಿಂದ ದಂಡ ವಿಧಿಸಲಾಗುತ್ತಿತ್ತು.


Share