ಮೈಸೂರು; ಇ೦ದಿನಿಂದ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ

Share

ಮೈಸೂರು ಕೊರೊನಾ ಮಾಹಿತಿ 22/07/2020 ಇಂದಿನಿಂದ ರಾತ್ರಿ ಕರ್ಪ್ಯೂ ಸಡಿಲಿಕೆಯಾಗಿದೆ . ಸಂಜೆ 6 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಇದ್ದ ಕರ್ಪ್ಯೂ ಇಂದಿನಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ . ಮೈಸೂರಿನ ಭಾಗಶಃ ಲಾಕ್‌ಡೌನ್ ಇರುವ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ( ಮಂಡಿ , ಲಷ್ಕರ್ , ನರಸಿಂಹರಾಜ ಹಾಗೂ ಉದಯಗಿರಿ ) ಹೊರತುಪಡಿಸಿ ಬೇರೆ ಎಲ್ಲಾ ಕಡೆ ಅಂಗಡಿ , ಹೋಟೆಲ್ ಸೇರಿ ಎಲ್ಲಾ ವ್ಯಾಪಾರಕ್ಕೂ ಇದು ಅನ್ವಯವಾಗಲಿದೆ .
ಸೂಚನೆ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಜೊತೆ ಜೊತೆಗೆ ಸಾವಿನ ಸಂಖ್ಯೆ ಸಹಾ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ . ಹೀಗಾಗೆ ಕರ್ಪ್ಯೂ ಸಡಿಲಿಕೆಯಾಗಿದ್ದರು ಅನಗತ್ಯವಾಗಿ ಹೊರಗಡೆ ಬರಬೇಡಿ . ತೀರ ಅಗತ್ಯತೆ ಇದ್ದರೆ ಮಾತ್ರ ಬನ್ನಿ . ಇಲ್ಲವಾದರೆ ಸುರಕ್ಷಿತವಾಗಿ ಮನೆಯಲ್ಲೇ ಇರಿ . 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರನ್ನು ಹೊರಗೆ ಕಳುಹಿಸಬೇಡಿ . ಹೊರಗೆ ಬಂದಾಗ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ . ಬಹುಮುಖ್ಯವಾಗಿ ರಾತ್ರಿ 9 ರಿಂದ ಕರ್ಪ್ಯೂ ಅಂದರೆ 9 ಗಂಟೆಯವರೆಗೂ ವ್ಯಾಪಾರಕ್ಕೆ ಅವಕಾಶ ಇಲ್ಲ . 9 ಗಂಟೆಯ ಒಳಗೆ ಎಲ್ಲರೂ ಮನೆಯಲ್ಲಿರಬೇಕು ಕೊನೆ ಮಾತು ಲಾಕ್‌ಡೌನ್ , ಸೀಲ್‌ಡೌನ್ , ಕರ್ಪ್ಯೂ , ಕಂಟೈನ್‌ಮೆಂಟ್ , ಇತ್ಯಾದಿ ಇತ್ಯಾದಿ ಏನೇ ಮಾಡಿದರೂ ಜನರ ಸಹಕಾರವಿಲ್ಲದೆ ಕೊರೊನಾ ನಿಯಂತ್ರಣ ಅಸಾಧ್ಯ . ಆದ್ದರಿಂದ ಜಿಲ್ಲಾಡಳಿತದ ಜೊತೆ ಸಹಕರಿಸಿ . ಮತ್ತೊಮ್ಮೆ ಮೈಸೂರು ಕೊರೊನಾ ಮುಕ್ತವಾಗಲು ಕೈ ಜೋಡಿಸಿ.


Share