ಮೈಸೂರು ಉದ್ಘಾಟನೆ ಗುದ್ದಲಿ ಪೂಜೆ ಕಾರ್ಯಕ್ರಮ ಕೈಬಿಡಲು ಡಿಸಿ ಸೂಚನೆ.

Share

ಮೈಸೂರು, ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುದ್ದಲಿಪೂಜೆ ಉದ್ಘಾಟನೆ ಹಾಗೂ ಇತರೆ ಸಮಾರಂಭಗಳ ಯೋಜನೆಯನ್ನು ಕೈಬಿಡುವಂತೆ ಜಿಲ್ಲಾ ಆಡಳಿತ ಮನವಿ ಮಾಡಿದೆ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ 20 ಜನ ಮೀರದಂತೆ ಆರೋಗ್ಯ ಹಿತದೃಷ್ಟಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
[7/9, 12:20 PM] mysorepathrike: ಮೈಸೂರು ಜಿಲ್ಲೆಯ ಎಲ್ಲಾ ಮಾನ್ಯ ಸಂಸದರು / ವಿಧಾನಸಭಾ ಸದಸ್ಯದು / ವಿಧಾನ ಪರಿಷತ್ ಸದಸ್ಯರು ರವರ ಆಪ್ತ ಗುದ್ದಲಿ ಪೂಜೆ,ಉದ್ಘಾಟನೆ ಕಾರ್ಯಕ್ರಮಗಳನ್ನು ಕೈಬಿಡುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಸೂಚಿಸಿದ್ದಾರೆ. ಕೂವೀಡ್ -19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮೈಸೂರು ಜಿಲ್ಲಾದ್ಯಂತ ಕೊವೀಡ್ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು , ಸಾವುಗಳು ಸಹ ಸಂಭವಿಸುತ್ತಿರುವುದರಿಂದ ಜನ ದಟ್ಟಣೆ ಕಾರ್ಯ ಕ್ರಮಗಳು ಹಾಗೂ ಜನ ಸೇರುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕಾಗಿರುತ್ತದೆ . ಗುದ್ದಲಿ ಪೂಜೆ / ಉದ್ಘಾಟನೆಗಳು ಹಾಗೂ ಇತರೆ ಸಮಾರಂಭಗಳ ಆಯೋಜನೆಯನ್ನು ಕೈಬಿಡುವಂತೆ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ 20 ಜನರು ಮೀರದಂತೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಮೈಸೂರು ಜಿಲ್ಲಾ ಆಡಳಿತ ಪ್ರಕಟಣೆಯಲ್ಲಿ ಕೋರಿದೆ


Share