ಮೈಸೂರು, ಉದ್ಯಾನವನಕ್ಕೆ ದಿವಂಗತ ನಟ ವಿಷ್ಣುವರ್ಧನ್ ಹೆಸರು ನೀಡಲು ಆಗ್ರಹ.

Share

ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಸಾಹಸ ಸಿಂಹ ವಿಷ್ಣುವರ್ಧನ್ ಉದ್ಯಾನವನಕ್ಕೆ ಅಧಿಕೃತವಾಗಿ ಹೆಸರು ಇಡಲು ಹಾಗೂ ಪ್ರತಿಮೆ ನಿರ್ಮಾಣ ಮಾಡಲು ಮೈಸೂರು ಮಹಾನಗರ ಪಾಲಿಕೆಯಲ್ಲಿ ಪೂಜ್ಯ ಮಹಾಪೌರರಾದ ತಸ್ಲಿಂ ಅವರಿಗೆ ಮನವಿ ಪತ್ರ ನೀಡಲಾಯಿತು

ವಿಷಯ: ಮೈಸೂರು ನಗರಪಾಲಿಕೆ ವತಿಯಿಂದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹೆಸರನ್ನು ಅರಮನೆ ಪಕ್ಕದ ಉದ್ಯಾನಕ್ಕೆ ಅಧಿಕೃತವಾಗಿ ನಾಮಕರಣ ಮಾಡಿ ವಿಷ್ಣು ಪ್ರತಿಮೆ ಸ್ಥಾಪಿಸಲು ಬರುವ ನಗರ ಪಾಲಿಕಾ ಕೌನ್ಸೆಲಿಂಗ್ ಸಭೆಯಲ್ಲಿ ಕ್ರಮಕೈಗೊಳ್ಳುವಂತೆ ತಮ್ಮಲ್ಲಿ ವಿನಂತಿಸುವ
ಮನವಿ ಪತ್ರ ನೀಡಿ ಮಾತನಾಡಿದ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ರಾದ ಎಂಡಿ ಪಾರ್ಥಸಾರಥಿ
ಕನ್ನಡಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರು ತಮ್ಮ ಅಭಿನಯ ಕಲೆಯ ಮೂಲಕ ವಿಶ್ವದೆಲ್ಲಡೆ ಜನಪ್ರಿಯರಾಗಿ ಕೀರ್ತಿಗಳಿಸಿದ್ದಾರೆ ಅವರು ನಮ್ಮ ಮೈಸೂರಿನವರು ಎಂಬುದೇ ನಮ್ಮ ಹೆಮ್ಮೆ, ಅವರ ಎಲ್ಲಾ ಚಿತ್ರಗಳು ಕುಟುಂಬ ಪ್ರಧಾನವಾಗಿದ್ದವು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು, ಬಹುತೇಖ ಅವರ ಎಲ್ಲಾ ಚಿತ್ರಗಳ ಚಿತ್ರಿಕರಣ ಮೈಸೂರಿನಲ್ಲಿಯೇ ಆಗಿದೆ ಇದು ನಮ್ಮ ಊರಿನ ಸೊಬಗನ್ನು ಸಹ ಹೊರಗಡೆ ಪಸರಿಸಿದೆ, ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಡಾ. ವಿಷ್ಣುವರ್ಧನ ಉದ್ಯಾನವನ್ನು ರಾಜ್ಯಸರ್ಕಾರ ಮತ್ತು ನಗರಪಾಲಿಕೆ ಅಧಿಕೃತವಾಗಿ ಘೋಷಿಸಿ ಅಭಿವೃದ್ಧಿ ಮಾಡುತ್ತ ಮುಂದಾಗಬೇಕು ಮತ್ತು ಉದ್ಯಾನವನದಲ್ಲಿ ವಿಷ್ಣುವರ್ಧನ ರವರ ಪ್ರತಿಮೆಯನ್ನು ಸ್ಥಾಪಿಸಬೇಕು ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಇದರಿಂದ ಪ್ರವಾಸೋದ್ಯಮ ಸಹಕಾರಿಯಾಗಲಿದೆ ರಸ್ತೆಬದಿವ್ಯಾಪಾರಸ್ಥರು ಸೇರಿದಂತೆ ಹೊಟೆಲ್ ಉದ್ಯಮಕ್ಕೆ ಸಹಕಾರಿಯಾಗಲಿದೆ..
ನಂತರ ಮಾತನಾಡಿದ ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿಟಿ ಪ್ರಕಾಶ್ ಪ್ರತಿಮೆ ನಿರ್ಮಾಣಕ್ಕೆ ನಗರ ಪಾಲಿಕೆಯಲ್ಲಿ ಹಣವಿಲ್ಲದಿದ್ದರೆ ಅಭಿಮಾನಿಗಳೇ ಹಣವನ್ನು ಹಾಕಿ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುತ್ತೇವೆ ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ ದಯಮಾಡಿ ಮುಂಬರುವ ಕೌನ್ಸಿಲಿಂಗ್ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಅಭಿಮಾನಿಗಳಿಗೆ ಸಂತೋಷ ವಿಚಾರ ನೀಡುತ್ತೀರಾ ಎಂದು ಭರವಸೆಯಲ್ಲಿ ಇದ್ದೇವೆ ಈಗಾಗಲೇ ತುಂಬಾನೇ ತಡವಾಗಿದೆ ಅತಿ ಶೀಘ್ರದಲ್ಲೆ ಪ್ರತಿಮೆ ನಿರ್ಮಾಣವಾಗಲು ಮುಂದಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ
ಇದೇ ಸಂದರ್ಭದಲ್ಲಿ ಡಿಟಿಎಸ್ ಫೌಡೇಷನ್ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂಡಿ ಪಾರ್ಥಸಾರಥಿ ,ವಿಷ್ಣು ಅಭಿಮಾನಿಗಳಾದ ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್, ಮಹದೇವ್ ಪ್ರಸಾದ್ ,ಬಸವರಾಜು ,ಆಟೋ ಪಾಪು ,ಹರೀಶ್ ನಾಯ್ಡು, ಮಹದೇವು ,ಹಾಗೂ ಇನ್ನಿತರರು ಹಾಜರಿದ್ದರು


Share