ಮೈಸೂರು ಎಂದಿನಂತೆ ದೇವಾಲಯಕ್ಕೆ ಬಂದ ಭಕ್ತರು

553
Share

ಮೈಸೂರು ನಗರಮೈಸೂರು ನಗರದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿರುವ ದತ್ತ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಬೆಳಗ್ಗೆ ಎಂದಿನಂತೆ ಪೂಜಾ ವಿಧಾನ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗೆಯಿಂದ ಬಂದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ಯಾವುದೇ ರೀತಿಯ ತೀರ್ಥ ಪ್ರಸಾದ ವ್ಯವಸ್ಥೆ ಮಾಡಿರಲಿಲ್ಲ, ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನವನ್ನು ತೆರೆಯಲಾಗಿದೆ. ವಿಶೇಷವಾಗಿ ಭಕ್ತರು ದೇವರಿಗೆ ಸಮರ್ಪಿಸಲು ತಂದಿದ್ದ ಕಾಣಿಕೆಯನ್ನು ಹಿಂದಿರುಗಿ ಕಳುಹಿಸಲಾಗುತ್ತಿತ್ತು. ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಯಾವುದೇ ಕಾರಣಕ್ಕೂ ಸದ್ಯಕ್ಕೆ ಕಾಣಿಕೆ ದೇವಸ್ಥಾನಕ್ಕೆ ತರಬಾರದು ಎಂದು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದ ಈ ಕ್ರಮ ತೆಗೆದುಕೊಳ್ಳಲಾಯಿತು. ವಯಸ್ಸಾದವರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದವರಿಗೆ ದೇವಸ್ಥಾನದ ಒಳಗೆ ಪ್ರವೇಶ ನಿರ್ಬಂಧ ಮಾಡಲಾಗಿತ್ತು.


Share