ಮೈಸೂರು, ಎನ್. ಆರ್. ಕ್ಷೇತ್ರದ ಎಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

Share

ಆಮ್ ಆದ್ಮಿ ಪಾರ್ಟಿ ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಶ್ರೀಮತಿ ಧರ್ಮಶ್ರೀ ಸಿಂಗ್ ಅವರು 13‌ ರ0ದು ನರಸಿಂಹರಾಜ ಕ್ಷೇತ್ರದಲ್ಲಿ ತಮ್ಮ ಚುನಾವಣಾ ನಾಮಾಂಕನ ಪತ್ರ ಸಲ್ಲಿಸಿದರು.
ಉದಯಗಿರಿಯಿಂದ ಸಾವಿರದೈನೂರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಬೆಂಬಲಿಗರೂಂದಿಗೆ ಚುನಾವಣಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು, ತಮ್ಮ ತಂದೆ ನಿವೃತ್ತ ಎಸಿಪಿ ಟಿ ಜಿ ಸಂಗ್ರಾಮ್ ಸಿಂಗ್, ಶ್ರೀಮತಿ ಪದ್ಮ,  ಡಾ. ರಿಝ್ವಾನಾ ಅಫಸರ್, ಲಕ್ಷ್ಮೀಕಾಂತ್ ತಿವಾರಿ ಇವರ ಸಮ್ಮುಖದಲ್ಲಿ ರಿಟರ್ನಿಂಗ್ ಅಧಿಕಾರಿ ಶ್ರೀ ಮಂಜುನಾಥ ಸಿಂಗ್ ಅವರಿಗೆ ದಾಖಲಾತಿಗಳನ್ನು ಸಲ್ಲಿಸಿದರು. ಚುನಾವಣಾ ರ್ಯಾಲಿಯ ನೇತೃತ್ವ ವಹಿಸಿದ್ದವರು ಶ್ರೀ ಟಿ ಜಿ ಸಂಗ್ರಾಮ್ ಸಿಂಗ್, ಇಸ್ಮಾಯಿಲ್, ಮೊಝಾಮ್, ಸಾದಿಕ್, ಮಂಗಳಾ, ಕೀರ್ತಿ, ಶಹಾಬ್, ಬೇಗ್ ಮತ್ತು ಗೌಸ್.


Share