ಮೈಸೂರು, ಒಳಚರಂಡಿ ಕೆಲಸ ಗೊಳಿಸಿ ಪ್ರತಿಭಟನೆ

307
Share

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಒಳಚರಂಡಿ ಕಾರ್ಮಿಕರಿಗೆ ಆಗುತ್ತಿರುವ ವಂಚನೆ ಕುರಿತು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೈಸೂರು ಮಹಾನಗರ ಪಾಲಿಕೆಯ ಗಮನ ಸೆಳೆಯಲು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ಮೈಸೂರು ನಗರಪಾಲಿಕೆಯ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಮೇಯರ್ ನಾರಾಯಣ್ ಮಾತನಾಡಿ ಸರ್ಕಾರ ನಮಗೆ ಆಗುತ್ತಿರುವ ವಂಚನೆಗಳ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳದಿದ್ದರೆ 15ದಿನಗಳ ನಂತರ ಕೆಲಸವನ್ನು ಸ್ಥಗಿತಗೊಳಿಸಿ ಮಲಮೂತ್ರ ಸುರಿದು ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಪಾಲಿಕೆಯಲ್ಲಿ ಸುಮಾರು 65ವಾರ್ಡ್ ಹಾಗೂ ಮೈಸೂರು ನಗರ ವಿಸ್ತೀರ್ಣವುಳ್ಳ ಸುಮಾರು ಕೊಳವೆ ಮಾರ್ಗಕ್ಕೆ ಸುಮಾರು 231ಜನ ಒಳಚರಂಡಿ ಕಾರ್ಮಿಕರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ. ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಭಾರತ ಅಭಿಯಾನದಲ್ಲಿ 5 ಬಾರಿ ಪ್ರಶಸ್ತಿಗಳು ಬಂದಾಗಲೂ ನಮ್ಮ ಒಳಚರಂಡಿ ಕಾರ್ಮಿಕರನ್ನು ಕಡೆಗಣಿಸಿರುತ್ತಾರೆ. ಪ್ರಸ್ತುತ ವರ್ಷಗಳಿಂದ ನಗರ ಪಾಲಿಕೆಯಲ್ಲಿ ಗುತ್ತಿಗೆ ಕಾರ್ಮಿಕರಿಗೂ ಹಾಗೂ ಒಳಚರಂಡಿ ಕಾರ್ಮಿಕರಿಗೂ ಒಂದೇ ರೀತಿಯ ಉಪಹಾರ ನೀಡುತ್ತಿದ್ದು ಆದರೆ ಉಪಹಾರ ಭತ್ಯೆಯನ್ನು ನಮ್ಮ ಒಳಚರಂಡಿ ಕಾರ್ಮಿಕರಿಗೆ ನೀಡದೇ ವಂಚಿಸಿರುತ್ತಾರೆ ಎಂದು ಆರೋಪಿಸಿದರು.

ಒಳಚರಂಡಿ ವಿಭಾಗದಲ್ಲಿ 231 ಜನ ಖಾಲಿ ಇರುವ ಹುದ್ದೆಗಳಿಗೆ ಸದರಿ ಕೆಲಸ ಮಾಡುತ್ತಿರುವ ಎಲ್ಲಾ ಒಳಚರಂಡಿ ಕಾರ್ಮಿಕರನ್ನು ಖಾಯಂ ಮಾಡಬೇಕು. ಸ್ವಚ್ಛತೆಯ ಗುತ್ತಿಗೆ ಪೌರಕರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರದ ಭತ್ಯೆ 25000ರೂ.ಗಳನ್ನು ಹಾಗೂ ಅವರಿಗೆ ನೀಡುವ ಎಲ್ಲಾ ಸೌಲಭ್ಯವನ್ನು ನಮ್ಮ ಒಳಚರಂಡಿ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಉನ್ನತ ಸಮಿತಿಯ ಅಧ್ಯಕ್ಷ ಎನ್.ಮಾರ,ಮಹದೇವ ಜಿ, ಶಿವಣ್ಣ, ಶ್ರೀನಿವಾಸ, ಕುಮಾರಸ್ವಾಮಿ,ಗಣೇಶ ಮತ್ತಿತರರು ಪಾಲ್ಗೊಂಡಿದ್ದರು.


Share