ಕಾಣೆಯಾದ ಮಹಿಳೆ ಪತ್ತೆಗೆ ಮನವಿ
ಮೈಸೂರು,- ಜೂನ್ 21 ರಂದು ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಲ್ಲವಿ ಎಂಬ 37 ವರ್ಷದ ಮಹಿಳೆ ಕಾಣೆಯಾಗಿದ್ದಾರೆ.
ಚಹರೆ: ಕಾಣೆಯಾಗಿರುವ ಮಹಿಳೆಯು ಸುಮಾರು 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದಾರೆ. ಈ ವ್ಯಕ್ತಿಯು ಕಾಣೆಯಾದಾಗ ಕೆಂಪು ಬಣ್ಣದ ಸೀರೆ, ಕಪ್ಪು ಬಣ್ಣದ ರವಿಕೆ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಸರಗೂರು ಪೊಲೀಸ್ ಠಾಣೆಗೆ ದೂ.ಸಂ: 08228-265542, 9480805064 ಅನ್ನು ಸಂಪರ್ಕಿಸಬಹುದು ಎಂದು ಸರಗೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.