ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಮೆಟ್ರೊಪೋಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಮುಂಭಾಗ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಹುತಾತ್ಮ ಯೋಧರಿಗೆ ಜೈಕಾರ ಕೂಗಿ ಗೌರವ ಸಲ್ಲಿಸಲಾಯಿತು.
ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕರಾದ ನಾಗೇಂದ್ರರವರು ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರ ತ್ಯಾಗ-ಬಲಿದಾನವನ್ನು ಕೊಂಡಾಡಿ, ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹಾಗೂ ರಕ್ಷಣಾ ಸಚಿವರಾಗಿದ್ದ ದಿವಂಗತ ಜಾರ್ಜ್ ಫರ್ನಾಂಡಿಸ್ ರವರ ಕೊಡುಗೆಯನ್ನು ಸಹ ಬಣ್ಣಿಸಿ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ನಾಗೇಂದ್ರ, ನಗರ ಪಾಲಿಕೆ ಸದಸ್ಯೆ ಪ್ರಮಿಳಾ ಭರತ್, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ವಿಕ್ರಮ್ ಐಯ್ಯಂಗಾರ್, ಶ್ರೀರಾಮಸೇನೆ ಸಂಜಯ್, ಪುನಿತ್, ಆನಂದ್, ಎಸ್.ಎನ್.ರಾಜೇಶ್, ಸಂದೇಶ್ ಪವಾರ್, ಜೀವಧಾರ ಗಿರೀಶ್, ಅಜಯ್ ಶಾಸ್ತ್ರಿ, ಶಿವಪ್ರಕಾಶ್, ಬಿಜೆಪಿ ಯುವ ಮೋರ್ಚಾದ ಭರತ್, ಟಿ.ಎಸ್.ಅರುಣ್, ಸಚಿನ್, ಸುಚೀಂದ್ರ, ವಿನೋದ್, ಚೆನ್ನಬಸವಣ್ಣ, ಎಬಿವಿಪಿ ಮುಖಂಡರಾದ ಸುಪ್ರೀತ್, ಶ್ರೀರಾಮ, ಶಿವು ಹಾಜರಿದ್ದರು.