ಮೈಸೂರು ಕೆಆರ್ ಕ್ಷೇತ್ರ- ಶ್ರೀವತ್ಸ ಅವರಿಗೆ ಟಿಕೆಟ್ ಬಹುತೇಕ ಖಚಿತ

Share

ಮೈಸೂರು- ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಸ್ಥಳೀಯ ಘಟಕದ ಅಧ್ಯಕ್ಷ, ಆರ್ ಎಸ್ ಎಸ್ ಕಾರ್ಯಕರ್ತ ಶ್ರೀ ವತ್ಸ ರವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಬಹುತೇಕ ಖಚಿತ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ಮಾಜಿ ಮೂಡಾ ಅಧ್ಯಕ್ಷ ಶ್ರೀ ರಾಜೀವ್ ಅವರಿಗೆ ಟಿಕೆಟ್ ದೊರೆಯುವುದಿಲ್ಲ ಎಂದು ಹೇಳಲಾಗುತ್ತಿದ್ದು ಅವರು ಹಾಗೊಂದು ವೇಳೆ ಟಿಕೆಟ್ ವಂಚಿತರಾದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿ ಆಗಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ, ಆದರೆ ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ .ಈ ಮಧ್ಯೆ ಹಾಲಿ ಶಾಸಕರಾದ ರಾಮದಾಸ್ ರವರಿಗೆ ಕೆಲವು ಸಂಘಟನೆಗಳು, ಸ್ಥಳೀಯರಿಂದಲೂ ಪಕ್ಷ ಈ ಬಾರಿಯ ಟಿಕೆಟ್ ಕೊಡುವ ಬಗ್ಗೆ ಭಿನ್ನಾಭಿಪ್ರಾಯ ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ವರಿಷ್ಠರು ಟಿಕೆಟ ಕೊಡದಿರಲು ಯೋಚಿಸಿದ್ದಾರೆ ಎಂದು ಸಹ ತಿಳಿದು ಬಂದಿದೆ, ಆದರೂ ರಾಜಕೀಯದಲ್ಲಿ ಕೊನೆ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು- ಕಾಲಾಯ ತಸ್ಮೈ ನಮಃ


Share