ಮೈಸೂರು ಕೆ ಆರ್ ಕ್ಷೇತ್ರದ ಶಾಸಕರಿಂದ ಧ್ವಜಾರೋಹಣ

Share

ಮೈಸೂರು
ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ರವರಿಂದ ಸ್ವತಂತ್ರ ದಿನಾಚರಣೇಯ ಅಂಗವಾಗಿ ದ್ವಜಾರೋಹಣ.
74 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ರವರು ವಿದ್ಯಾರಣ್ಯಪುರಂ ಕಛೇರಿಯ ಆವರಣದಲ್ಲಿ ನಗರ ಪಾಲಿಕೆ ಸದಸ್ಯರ ಉಪಸ್ಥಿತಿಯಲ್ಲಿ ದ್ವಜಾರೋಹಣ ಮಾಡಿದರು.
ದ್ವಜಾರೋಹಣ ನಂತರ ಮಾತನಾಡಿದ ಶಾಸಕರು ನೆರೆದಿದ್ದ ಸಾರ್ವಜನಿಕರು, ನಗರಪಾಲಿಕೆಯ ಸದಸ್ಯರುಗಳಿಗೆ 74ನೇ ಸ್ವತಂತ್ರ ದಿನಾಚರಣೆಯ ಶುಭಾಷಯವನ್ನು ಕೋರಿದರು. ಇಂದಿನ ಪರಿಸ್ಥಿತಿಯಲ್ಲಿ ಸರಳವಾಗಿ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಚರಣೆ ಸರಳವಾದರೂ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಸುಮಾರು 1,86,800 ಜನ ತನ್ನ ಪ್ರಾಣವನ್ನು ಅರ್ಪಿಸಿದ್ದು ಅವರನ್ನು ನೆನೆಯುತ್ತಾ 74ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಬೇಕಿದೆ.
ದೇಶದ ನೆಚ್ಚಿನ ಪ್ರದಾನಿ ನರೇಂದ್ರ ಮೋದಿಯವರು 75ನೇ ವರ್ಷದ ಸ್ವಾತಂತ್ರ ದಿನಾಚರಣೆ ಹೆಂಗಿರಬೇಕೆಂದು ಒಂದು ಕಲ್ಪನೆಯನ್ನು ಕೊಡುತ್ತಾ ಬಂದಿದ್ದಾರೆ. ಒಬ್ಬ ರೈತ ಸ್ವಾವಲಂಬಿಯಾಗಿ ಬದುಕುವಂತಹ ವ್ಯವಸ್ಥೆಯಾಗಬೇಕು, ಪ್ರತಿಯೊಬ್ಬರಿಗೂ ಸ್ವಂತ ಸೂರನ್ನು ಕಲ್ಪಿಸಬೇಕು, 2022 ಮಾರ್ಚ್31 ರ ಒಳಗೆ ಅರ್ಜಿ ಹಾಕಿರುವ ಎಲ್ಲರಿಗೂ ಮಂಜೂರಾತಿ ಮಾಡುವ ಸಂಕಲ್ಪ ಮಾಡಿದ್ದಾರೆ. ಭಾರತದ ಭವಿಷ್ಯ ರೂಪಿಸುವ ಯುವಕರಿಗೆ ಕೌಶಲ್ಯಾಭಿವೃದ್ದಿ ಪಡಿಸಿ ಉದ್ಯೋಗವನ್ನು ಸೃಷ್ಠಿಸುವ ಉದ್ದೇಶ ಹೊಂದಿರುತ್ತಾರೆ. ಇದೆಲ್ಲದರ ಜೊತೆಗೆ ಚೈನಾ ಪಾಕಿಸ್ತಾನ ಯುದ್ದಮಾಡಲು ತುದಿಗಾಲಿನಲ್ಲಿ ನಿಂತಿದ್ದು ಬಾಹ್ಯಯುದ್ದದ ಜೊತೆಗೆ ದೇಶದಲ್ಲಿ ಆಂತರಿಕ ಯುದ್ದವೂ ಸಹ ನಡೆಯುತಿದ್ದು ದೇಶದ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಹೆಚ್ಚಾಗಿರುತ್ತದೆ. ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವಗುರುವನ್ನಾಗಿಸಲು ಎಲ್ಲರು ಸಂಕಲ್ಪಿಸಿ ಮುನ್ನಡೆಯಬೇಕಿದೆ. ಭಾರತ ಚೆನ್ನಾಗಿರಬೇಕಾದರೇ ನಮ್ಮ ರಾಜ್ಯ ಚೆನ್ನಾಗಿರಬೇಕು, ಮೈಸೂರು ಚೆನ್ನಾಗಿರಬೇಕು ಹಾಗೇ ನಮ್ಮ ಕೃಷ್ಣರಾಜ ಕ್ಷೇತ್ರ ಮಾದರಿ ಕ್ಷೇತ್ರವಾಗಬೇಕು 1 ವರ್ಷದ ಯೋಜನೇ ರೂಪಿಸಿ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಇಟ್ಟುಕೊಂಡು ಮುನ್ನಡೆಯಬೇಕಿರುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರಪಾಲಿಕೆ ಸದಸ್ಯರುಹಾಗೂ ಕ್ಷೇತ್ರದ ಅಧ್ಯಕ್ಷರಾದ ವಡಿವೇಲು,ಪ್ರದಾನ ಕಾರ್ಯದರ್ಶಿಗಳಾದ ನೂರ್ ಫಾತಿಮಾ,ನಾಗೇಂದ್ರ,ಕಾರ್ಯದರ್ಶಿಗಳು,ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share